ಈ ಮಹಿಳೆ ಕಂಕುಳಿನ ಕೂದಲಿನಿಂದ ಗಳಿಸಿದ್ದು ಬರೋಬ್ಬರಿ 5 ಕೋಟಿ!

This woman won not with gold-diamonds, but with armpit hair

ಇಂದಿನ ಕಾಲದಲ್ಲಿ, ಜನರು ಹಣ ಗಳಿಸಲು ವಿಚಿತ್ರ ಮಾರ್ಗಗಳನ್ನು ಹುಡುಕುತ್ತಲೆ ಇರುತ್ತಾರೆ. ಇತ್ತೀಚೆಗಂತು ಹಣದ ಮೋಹಕ್ಕೆ ಸಿಲುಕಿ ತಾವೇನು ಮಾಡುತ್ತಿದ್ದೇವೆ ಎಂಬ ಸ್ಥಿತ ಪ್ರಜ್ಞೆಯನ್ನು‌ಕಳೆದುಕೊಂಡು ಸಂಬಂಧ, ಮರ್ಯಾದೆ ಹೀಗೆ ಎಲ್ಲಾವನ್ನು ತ್ಯಜಿಸುವವರ ಸಂಖ್ಯೆಯು ಹೆಚ್ಚಾಗುತ್ತಲೆ ಇದೆ.

ಅದಾಗ್ಯೂ ಈ ಲಾಕ್‌ಡೌನ್ ಸಂದರ್ಭದಲ್ಲಂತು ಜನರು ಹಣ ಸಂಪಾದಿಸುವ ವಿಚಿತ್ರ ಮಾರ್ಗಗಳು ವೈರಲ್ ಆಗಿದ್ದನ್ನು ನಾವೆಲ್ಲಾ ಕಂಡಿರಬಹುದು. ದುಡಿಮೆ ಇಲ್ಲದೆ ಮನೆಲ್ಲೆ ಲಾಕ್ ಜನರಿಗೆ ಸಂಪಾದನೆಗಾಗಿ ಮಾರ್ಗ ಕಂಡುಕೊಂಡು ವಿಧಾನಗಳು ಮಾತ್ರ ವಿಚಿತ್ರವಾಗಿತ್ತು.

ಹೀಗೆ ಲಾಕ್‌ಡೌನ್ ಸಮಯದಲ್ಲಿ ಮಹಿಳೆಯೊಬ್ಬಳು ತನ್ನ Vases ಮಾರಾಟ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುವ ದಾರಿಯನ್ನು‌ ಕಂಡುಕೊಂಡಿದ್ದು, ಆ ಕೂದಲನ್ನು ತಗಳುವವರು ಯಾರು? ಎಂಬ ವಿಚಿತ್ರ ಪ್ರಶ್ನೆಯು ನಿಮ್ಮೊಳಗೆ ಕುತೂಹಲಕಾರಿಯಾಗಿರಬಹುದು. ಅದಕ್ಕೆ ಉತ್ತರ ಮುಂದಿದೆ ನೋಡಿ.

ಆ ಸಂದರ್ಭದಲ್ಲಿ ಟ್ರೆಂಡ್ ಆದ ಸೋಶಿಯಲ್ ಮೀಡಿಯಾಗಳು ಇವತ್ತಿಗೂ ಮಿಂಚುತ್ತಲೆ ಇದೆ. ಅದ್ರಲ್ಲೂ ಈ ಫ್ಯಾನ್ಸ್ ಹೆಸರಿನ ಖಾತೆಗಳ ಮೂಲಕ ಅನೇಕ ಜನರು ಸಾಕಷ್ಟು ಹಣವನ್ನು ಗಳಿಸಿದ್ದು ಉಂಟು.

ಈ ಡ್ಯಾನ್ಸ್, ಕಾಮಿಡಿ, ಕುಣಿತ, ಹಾಡು, ಪಾಕಶಾಲೆ, ಪಾರ್ಲರ್, ಟೈಲರ್ ಹೀಗೆ ನಾನಾ ರೀತಿಯಲ್ಲಿ ಟ್ರೆಂಡ್ ಹಾಕ್ತಿದ್ರೆ ಇಲ್ಲಿ ಫೆನೆಲ್ಲಾ ಫಾಕ್ಸ್ ಎಂಬ ಮಹಿಳೆ ವಿಚಿತ್ರ ರೀತಿಯಲ್ಲಿ ಹಣ ಗಳಿಸುವ ಈ ಕೆಳಗಿನ ವಿಧಾನಗಳನ್ನು ಅಳವಡಿಸಿಕೊಂಡರು.

ಹೌದು! ಬ್ರಿಟನ್‌ನ ವೋರ್ಸೆಸ್ಟರ್ ನಿವಾಸಿ ಮೂವತ್ತು ವರ್ಷದ ಫೆನೆಲ್ಲಾ, ಎಂಬಾಕೆ ತನ್ನ ಕಂಕುಳಿನ ಕೂದಲನ್ನು ಆನ್‌ಲೈನ್‌ನಲ್ಲಿ ತೋರಿಸಿ 5 ಕೋಟಿಗೂ ಹೆಚ್ಚು ಹಣ ಸಂಪಾದಿಸಿದ್ದಾಳೆ. ಈ ವಿಚಿತ್ರ ರೀತಿಯಲ್ಲಿ ಮಹಿಳೆ ಲಕ್ಷಾಧಿಪತಿಯಾದ್ರೂ ಕೂಡ ಆಕೆಯ ಗೌರವ ಮಾತ್ರ ಎಲ್ಲೂ ಉಳಿದಿಲ್ಲ.

ಆ ಸಂದರ್ಬದಲ್ಲಿ ವೃತ್ತಿಯಲ್ಲೆನೋ ಹಣವನ್ನು ಸಂಪಾದಿಸಿದೆ. ಆದರೆ ಅದಕ್ಕಿಂತ ಆಚೆ ನನ್ನ ಸ್ವಾಭಿಮಾನ, ಗೌರವ ಕಳೆದುಕೊಂಡದ್ದಲ್ಲದೇ ಅನೇಕ ನಷ್ಟಗಳನ್ನು ಅನುಭವಿಸಿದೆ. ತನ್ನ ಕಂಕುಳಿನ ಕೂದಲನ್ನು ಪೋಸ್ಟ್ ಮಾಡಿದ ನಂತರ ಜನರು ನನ್ನನ್ನು ವಿಚಿತ್ರವಾಗಿ ನೋಡಲು ಪ್ರಾರಂಭಿಸಿದರು ಎಂದು ಫೆನೆಲ್ಲಾ ತಿಳಿಸಿದರು.

2018 ರಲ್ಲಿ, ಒಬ್ಬ ವ್ಯಕ್ತಿ ಅವಳನ್ನು ಬ್ಲ್ಯಾಕ್ ಮೇಲ್ ಮಾಡಿದ್ದು, ಆ‌ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದ್ದಕ್ಕೂ ಮುಂದಾಗಿದಳು. ಆ ಮನಸ್ಥಾಪದಿಂದ ಪಾರಾದ ಆಕೆ ಹೇಗೋ ಜೀವನ ಸಾಗಿಸುತ್ತಿರುವಾಗ ಈ ವರ್ಷವು ಮತ್ತೊಬ್ಬ ವ್ಯಕ್ತಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಫೆನೆಲ್ಲಾ ಅವರ ವೈಯಕ್ತಿಕ ಜೀವನವು ತುಂಬಾ ಸವಾಲಿನದಾಗಿದೆ. ಇನ್ನೂ ಹೇಳಬೇಕೆಂದರೆ ಅವಳು ಇಲ್ಲಿಯವರೆಗೆ ಪುರುಷರನ್ನು ನೇರವಾಗಿ ನೋಡಿಲ್ಲ. ಆದರೆ ಜನರು ಈ ಪೋಸ್ಟ್ ನಂತರ ಅವಳು ಯಾರೊಂದಿಗಾದರೂ ರಿಲೇಷನ್​ಶಿಪ್​ನಲ್ಲಿ ಇರಬಹುದು ಎಂದುಕೊಂಡಿದ್ದಾರೆ.

ಆದರೆ ಈಕೆ ತನ್ನ ಕಂಕುಳಿನ ಕೂದಲು ತೋರಿಸಿ ಕೋಟಿ ಕೋಟಿ ಹಣ ಮಾಡಿದ್ದಂತೂ ನಿಜನೇ ಬಿಡಿ. ಈಕೆ ಮಾಡಿದ ರೀತಿ ಸಾಹಸಕ್ಕೆ ನೀವು ಕೈ ಹಾಕಬೇಡಿ ಆಯ್ತ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!