nitish kumar; ‘ಲೈಂಗಿಕತೆ’ ಬಗ್ಗೆ ಹೇಳಿಕೆ ನೀಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾದ ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ, ನ.09: ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದು ಕ್ರಾಂತಿ ಮಾಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಇದೀಗ ಸದನದಲ್ಲಿ ‘ಲೈಂಗಿಕತೆಯ’ ಬಗೆಗಿನ ಹೇಳಿಕೆ ನೀಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೀಸಲಾತಿ ವ್ಯವಸ್ಥೆಗೆ ಹೊಸ ಮುನ್ನುಡಿ ಬರೆಯ ಹೊರಟ ಇವರು ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವಾಗ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡುವಾಗ ನೀಡಿದ ಒಂದು ಹೇಳಿಕೆ ಸಖತ್ ವೈರಲ್ ಆಗ್ತಾ ಇದೆ. ಬಿಹಾರ ಸಿಎಂ ವಿರುದ್ಧ ಮಹಿಳಾ ಆಯೋಗ ಕಿಡಿಕಾರಿದೆ.

ಅಧಿವೇಶನದಲ್ಲಿ ನಿತೀಶ್ ಕುಮಾರ್ ಹೇಳಿದ್ದೇನು?

ಖುದ್ದು ನಿತೀಶ್ ಕುಮಾರ್ ಅವರೇ ಹೇಳಿದಂತೆ ಒಂದು ಹುಡುಗ- ಹುಡುಗಿ ಮದುವೆ ಆಗುತ್ತೆ. ಮದುವೆ ಆದ್ಮೇಲೆ ರಾತ್ರಿಯಿಡೀ ಅವನು ಅವನು * ಕಾರಣಕ್ಕೆ ಮಕ್ಕಳು ಹುಟ್ಟುತ್ತವೆ. ಶಿಕ್ಷಿತ ಹುಡುಗಿಯಾದವಳು ಅವನು * ಅದನ್ನು ಪೂರ್ತಿ * ಅಂತಾರೆ. ಅದು * ಆಗೋವಾಗ ಹೊರಗೆ * ಬಿಡ್ತಾರೆ. ಹಾಗಾಗಿ ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ…! ಹೀಗೆ ನಾವು ಇಲ್ಲಿ ಬರೆಯಲು ಸಾಧ್ಯವಾಗದಷ್ಟು ಅಶ್ಲೀಲವಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಸದನದಲ್ಲಿ ಮಾತನಾಡುತ್ತಾರೆ ಎಂದರೆ ನಾವು ಶಾಕ್ ಆಗಲೇಬೇಕು.

dalit voilence; ದಲಿತರ ಮೇಲಾಗುವ ದೌರ್ಜನ್ಯ ತಡೆಗೆ ಕ್ರಮಗೊಳ್ಳಲು ಎಸ್ ಪಿ ಉಮಾ ಪ್ರಶಾಂತ್ ಸೂಚನೆ

ನಿತೀಶ್ ವಿರುದ್ಧ ಬಿಜೆಪಿ ಕೆಂಡಾಮಂಡಲ

ನಿತೀಶ್ ಕುಮಾರ್ ಹೇಳಿಕೆಗೆ ಬಿಹಾರ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.‌ 70ರ ವಯೋಮಾನದ ನಿತೀಶ್ ಕುಮಾರ್ ಮನಸ್ಸಿನಲ್ಲಿ ಇಂತಹ ಲೈಂಗಿಕ ಭಾವನೆಗಳು ಮೂಡುವುದು ತಪ್ಪು. ಜೊತೆಗೆ ಜನಪ್ರತಿನಿಧಿಗಳ ಸದನದಲ್ಲಿ ಇಂಥಾ ಮಾತು ಸರಿಯಲ್ಲ ಎಂದು ಟೀಕಿಸಿದೆ.

ಬಿಹಾರ ಸಿಎಂ ಹೇಳಿಕೆ ವಿರುದ್ಧ ರೊಚ್ಚಿಗೆದ್ದ ಮಹಿಳಾ ಆಯೋಗ

ಈ ಬೆಳವಣಿಗೆಗಳ ಮಧ್ಯೆಯೇ ಮಹಿಳಾ ಆಯೋಗ ಸಿಎಂ ನಿತೀಶ್ ಕುಮಾರ್ ಕ್ಷಮೆ ಯಾಚನೆಗೆ ಆಗ್ರಹಿಸಿದೆ. ವಿಧಾನಸೌಧದಲ್ಲಿ ಹೀಗೆ ಮಾತನಾಡಿದ್ದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಮಹಿಳೆಯರ ಗೌರವಕ್ಕೆ ಧಕ್ಕೆ. ಈ ಕೂಡಲೇ ಇವರು ಕ್ಷಮೆಯಾಚಿಸಬೇಕೆಂದು ಹೇಳಿಕೆ ವಿರುದ್ಧ ಗರಂ ಆಗಿದ್ದ ಮಹಿಳಾ ಆಯೋಗ ಒತ್ತಾಯಿಸಿದೆ.

ವಿರೋಧಕ್ಕೆ ಕ್ಯಾರೇ ಅನ್ನದೆ ಆರೋಪ ತಳ್ಳಿಹಾಕಿದ ಡಿಸಿಎಂ ತೇಜಸ್ವಿ ಯಾದವ್….!

ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುವಾಗ ಸಹಜವಾಗಿ ಎಲ್ಲರಿಗೂ ಮುಜುಗರ ಆಗುತ್ತದೆ. ಶಾಲಾ ಕಾಲೇಜುಗಳಲ್ಲೇ ಈ ಬಗ್ಗೆ ಶಿಕ್ಷಣ ನೀಡಲಾಗ್ತಿದೆ. ನಿತೀಶ್ ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಡಿಸಿಎಂ ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!