ದೈವಗಳಿಗೆ ಅಪಮಾನ ಮಾಡಿದವರು ಹುದ್ದೆ ತ್ಯಜಿಸಲೇಬೇಕು.! ಹಿಂದು ಕಾರ್ಯಕರ್ತರ ಆಕ್ರೋಶ

ದೈವಗಳಿಗೆ ಅಪಮಾನ ಮಾಡಿದವರು ಹುದ್ದೆ ತ್ಯಜಿಸಲೇಬೇಕು.! ಹಿಂದು ಕಾರ್ಯಕರ್ತರ ಆಕ್ರೋಶ

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಮುರುಗೇಶ್ ನಿರಾಣಿಯವರು ಇದೀಗ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ, ತಾವು ಪ್ರತಿನಿಧಿಸುತ್ತಿರುವ ಬೀಳಗಿ ಕ್ಷೇತ್ರದ ಜನರ ಮನೋರಂಜನೆಗಾಗಿ ಕರಾವಳಿಯ ಭೂತಾರಾದನೆಯನ್ನು ಅಪಹಾಸ್ಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸಪ್ ಸಂದೇಶ ಕಳುಹಿಸಿದ್ದ ಮುರುಗೇಶ್ ನಿರಾಣಿಯವರ ವಿರುದ್ದ ಎಫ್‌ಐಆರ್ ದಾಖಲಾಗಿತ್ತು.

ಇದೀಗ ಅದೇ ರೀತಿಯಲ್ಲಿ ತಮ್ಮ ಕ್ಷೇತ್ರದ ಜನರ ಮನೋರಂಜನೆಗಾಗಿ ಭೂತ ಕೋಲ, ದೈವ ನರ್ತನದ ಹಾಸ್ಯ ಕಾರ್ಯಕ್ರಮ ಕೈಗೊಂಡಿರುವುದು ಖಂಡನಾರ್ಹ ಎಂದು ಹಿಂದೂ ಕಾರ್ಯಕರ್ತರು ಅಕ್ರೋಶ ಹೊರಹಾಕುತ್ತಿದ್ದಾರೆ.

ಕೆಲ ಸಮಯದ ಹಿಂದೆ ಮೈಸೂರು ಮತ್ತಿತರ ಕಡೆ ಕೆಲವರು ತುಳುವರ ಆರಾಧ್ಯ ದೈವ ‘ಕೊರಗಜ್ಜ’ ಹಾಗೂ ಇತರ ದೈವಗಳ ಕೋಲ ಆಯೋಜಿಸಲು ಮುಂದಾದ ಅಧಿಕೃತ ಆಚರಣೆಯನ್ನೇ ದೈವಾರಾಧಕರು ವಿರೋಧಿಸಿದ್ದರು. ದೈವಗಳ ಹೆಸರನ್ನು ವಾಣಿಜ್ಯ ವಿಚಾರಕ್ಕೆ ಬಳಸುವುದನ್ನು ಅಥವಾ ನಾಟಕೀಯ ಸನ್ನಿವೇಶಕ್ಕೆ ಬಳಸುವುದನ್ನು ತಡೆಯುವ ಉದ್ದೇಶ ಹಿಂದೂ ಕಾರ್ಯಕರ್ತರದ್ದಾಗಿದೆ ಎನ್ನಲಾಗಿದೆ.

ಹೀಗಿರುವಾಗ ಬೀಳಗಿಯ ರಾಜಕೀಯ ಕಾರ್ಯಕ್ರಮದಲ್ಲಿ ಭೂತಾರಾಧನೆ ವೇಷ ಆಯೋಜಿಸಿ ಆ ಸನ್ನಿವೇಶವನ್ನು ಹಾಸ್ಯಕ್ಕಾಗಿ ಬಳಕೆ ಮಾಡಿರುವುದು ಖಂಡನಾರ್ಹ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

ನಿರಾಣಿಯವರ ಬೆಂಬಲಿಗರನ್ನು ರಂಜಿಸುವ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಆರ್.ಅಶೋಕ್ ಕೂಡಾ ನಿರಾಣಿಯವರಿಗೆ ಸಾಥ್ ನೀಡಿರುವುದು ಕೋಟ್ಯಾಂತರ ಹಿಂದೂಗಳ ಪಾಲಿಗೆ ನೋವುಂಟು ಮಾಡಿದೆ ಎನ್ನಲಾಗಿದೆ.

‘ನೀವು ನಿಜವಾಗಿಯೂ ಆರೆಸ್ಸೆಸ್ ಸಿದ್ದಾಂತ ಒಪ್ಪುವುದೇ ಆದರೆ, ಹಿಂದೂ ಸಂಘಟನೆಗಳ ನಿಲುವುಗಳನ್ನು ಒಪ್ಪಿಕೊಳ್ಳುವುದೇ ಆದರೆ,  ಬೀಳಗಿಯ ಈ ತಪ್ಪನ್ನು ಒಪ್ಪಿಕೊಂಡು, ನೈತಿಕ ಹೊಣೆ ಹೊತ್ತು ಈ ಇಬ್ಬರೂ ಸಚಿವರೂ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು  ಎಂದು ಹಿಂದೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದೇವೆ ಎಂದು ತಮ್ಮ ಆಕ್ರೋದ ಮಾತುಗಳಾಗಿವೆ.

ಇಲ್ಲವಾದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಸಚಿವರನ್ನು ಮುಖ್ಯಮಂತ್ರಿಗಳೇ ವಜಾ ಮಾಡಲಿ ಎಂದಿದ್ದಾರೆ

ಬಿಜೆಪಿಯು ನಿಜವಾಗಿಯೂ ಹಿಂದೂಗಳ ಹಿತ ಕಾಯುವ ಪಕ್ಷವೇ ಆಗಿದ್ದಲ್ಲಿ, ಹಿಂದೂ ದೇವರ ಬಗ್ಗೆ ಪದೇ ಪದೇ ಅವಹೇಳನ ಮಾಡುತ್ತಿರುವ.

ನಾಯಕರನ್ನು ಪಕ್ಷದಿಂದಲೇ ವಜಾ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

https://twitter.com/alvinviews/status/1629687425072271360?t=dZY27gj0TP6wDVtn3-QcTw&s=08

Leave a Reply

Your email address will not be published. Required fields are marked *

error: Content is protected !!