ಸರ್ಕಾರಿ ಸಂಸ್ಥೆಗಳಿಂದಲೇ ಸಾವಿರಾರು ಕೋಟಿ ಕರೆಂಟ್ ಬಿಲ್ ಬಾಕಿ – ಬಿಬಿಎಂಪಿ ಮೇಲೆ ಗರಂ ಆದ ಬೆಸ್ಕಾಂ..!

thousands of crores of current bills due from government institutions - do you know how much is due to bbmp?

ಕೆಲವೊಮ್ಮೆ ಅನೇಕ ವಿಚಾರಗಳಲ್ಲಿ ಅರಿವಿದ್ದರೂ ಕೂಡಾ ಸರ್ಕಾರಿ ಸಿಬ್ಬಂದಿಗಳು ಅಥವಾ ಸರ್ಕಾರಿ ಸಂಸ್ಥೆಗಳು ಎಡವುತ್ತಲೇ ಇರುತ್ತದೆ. ಬೆಸ್ಕಾಂ ಪಾಡಂತೂ ಈಗ ಹೇಳತೀರದು. ಗೃಹಜ್ಯೋತಿ ಯೋಜನೆ ಬಂದ ಮೇಲೆ ಜನಸಾಮಾನ್ಯರು ಕರೆಂಟ್ ಬಿಲ್ ಕಟ್ಟುತ್ತಿಲ್ಲ. ಇದೀಗ ಸರ್ಕಾರಿ ಸಂಸ್ಥೆಗಳಿಂದಲೂ ಕರೆಂಟ್ ಬಿಲ್ ಕಟ್ಟದೆ ಬಾಕಿಯಾಗಿದೆ.

ಇತ್ತ BBMP ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳೂ ಸಾವಿರಾರು ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆಲ್ಲಾ ಬುದ್ಧಿ ಹೇಳೋ ಬಿಬಿಎಂಪಿಯೇ 800 ಕೋಟಿಗೂ ರೂ.ಗಿಂತ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದೆ.

thousands of crores of current bills due from government institutions - do you know how much is due to bbmp?

ಗೃಹಜ್ಯೋತಿ ಜಾರಿಯಾದ ಮೇಲೆ ಮತ್ತಷ್ಟು ಸಮಸ್ಯೆಗಳ ಸುಳಿಗೆ ಬೆಸ್ಕಾಂ ಸಿಲುಕಿಕೊಂಡಂತಿದೆ. ಒಂದುಕಡೆ ಜನರು ಕರೆಂಟ್ ಬಿಲ್ ಕಟ್ಟೋಕೆ ಮೀನಮೀಷ ಎಣಿಸಿದ್ರೆ, ಇತ್ತ ಸರ್ಕಾರಿ ಸಂಸ್ಥೆಗಳೂ ಕರೆಂಟ್ ಬಿಲ್ ಕಟ್ಟದೇ ಕಳ್ಳಾಟ ಆಡ್ತಿದೆ. ಅದರಲ್ಲೂ ತೆರಿಗೆ, ದಂಡ, ಶುಲ್ಕ ಅಂತ ಜನರ ಪ್ರಾಣ ತೆಗೆಯೋ ಬಿಬಿಎಂಪಿಯೇ ನೂರಾರು ಕೋಟಿ ರೂಪಾಯಿ ಬೆಸ್ಕಾಂಗೆ ಕರೆಂಟ್ ಬಾಕಿ ಉಳಿಸಿಕೊಂಡಿದೆ ಎಂದರೆ ನೀವು ನಂಬಲೇಬೇಕು.

ಹೌದು, ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಸಂಸ್ಥೆಗಳು ಕೆಲವು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲ. ಇದರಿಂದ ಬೆಸ್ಕಾಂಗೆ 6,374 ಕೋಟಿ ರೂಪಾಯಿ ಬಿಲ್ ಬರುವುದು ಬಾಕಿ ಇದೆ.

ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೊರೆ:

ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೆಚ್ಚಿನ ಹೊರೆಯಾಗಿದೆ. ಪ್ರತಿಷ್ಠಿತ ಸಂಸ್ಥೆಗಳೇ ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ, ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆ, ಇತರೆ ಸರ್ಕಾರಿ ಸಂಸ್ಥೆಗಳಿಂದ ಒಟ್ಟು 6,000 ಕೋಟಿ ರೂ. ಗಿಂತ ಅಧಿಕ ಬಿಲ್ ಬಾಕಿ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

thousands of crores of current bills due from government institutions - do you know how much is due to bbmp?

ಯಾವ ಸಂಸ್ಥೆ – ಎಷ್ಟು ಬಾಕಿ ಗೊತ್ತಾ..?

ಬಿಬಿಎಂಪಿ : 820 ಕೋಟಿ ರೂ.
ಜಲಮಂಡಳಿ : 495 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ : 113 ಕೋಟಿ ರೂ.
ಸಣ್ಣ & ದೊಡ್ಡ ನೀರಾವರಿ ಇಲಾಖೆ : 51 ಕೋಟಿ ರೂ.
ಇತರೆ ಸರ್ಕಾರಿ ಸಂಸ್ಥೆಗಳು : 4,885 ಕೋಟಿ ರೂ.
ಒಟ್ಟು : 6,374 ಕೋಟಿ

ಬೆಸ್ಕಾಂಗೆ ಬಿಬಿಎಂಪಿ 820 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇಟ್ಟಿದೆ. ಬಿಬಿಎಂಪಿಗೆ ಹಲವು ಬಾರಿ ನೋಟೀಸ್ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೇಲಿನ ಹೊರೆ ತಪ್ಪಿಸಲು ನಾವು ಅನಿವಾರ್ಯವಾಗಿ ವಸೂಲಿ ಮಾಡಲೇಬೇಕಾದ ಸ್ಥಿತಿಗೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಸ್ಕಾಂ ಇಲಾಖೆ ಕರೆಂಟ್ ಬಿಲ್ ಕಟ್ಟದ ಇಲಾಖೆಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!