ಯುಬಿಡಿಟಿ ವಿದ್ಯಾರ್ಥಿಗಳಿಗೆ ಮೂರು ಚಿನ್ನದ ಪದಕ

Three gold medals for UBDT students

ಯುಬಿಡಿಟಿ ವಿದ್ಯಾರ್ಥಿಗಳಿಗೆ ಮೂರು ಚಿನ್ನದ ಪದಕ

ದಾವಣಗೆರೆ: ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ೨೦೨೧-೨೨ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸುವ ಮೂಲಕ ೩ ಚಿನ್ನದ ಪದಕಗಳೊಂದಿಗೆ ೧೪ ರ‍್ಯಾಂಕ್‌ಗಳನ್ನು ಪಡೆದು ಸಾಧನೆಗೈದಿದ್ದಾರೆ.

ಇಂಜಿನಿಯರಿಂಗ್ ಪದವಿಯಲ್ಲಿ ಶೃತಿ ಹೆಚ್. ಮಡಿವಾಳರ್, ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ ಸಂಗೀತಾ ಜಿ.ಆರ್ ಮತ್ತು ಕೆ.ಟಿ. ನೇಹಾ ಇವರು ಪ್ರಥಮ ರ‍್ಯಾಂಕ್ ಪಡೆಯುವುದರ ಮೂಲಕ ಚಿನ್ನದ ಪದಕ ಪಡೆದಿದ್ದು, ಉಳಿದಂತೆ ಇಂಜಿನಿಯರಿಂಗ್ ಪದವಿಯಲ್ಲಿ ಅಮೂಲ್ಯ ದ್ವಿತೀಯ ಹಾಗೂ ಎಸ್.ಎಂ. ಅನುಷ ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ, ವಿದ್ಯಾಶ್ರೀ, ಎ.ಎಲ್. ರೇಣುಕಾ ಮತ್ತು ಹಬೀಬ್ ಯು. ರೆಹಮಾನ್, ದ್ವಿತೀಯ, ಯು. ಪ್ರಭಾ ಮತ್ತು ಡಿ.ಎಸ್. ರಂಜಿತಾ ತೃತೀಯ, ಪಿ. ಪೂಜಾ ಮತ್ತು ಕೆ.ಆರ್. ಸಾಗರ್ ನಾಲ್ಕನೇ, ಹೆಚ್.ಎನ್. ಭಾಗ್ಯಶ್ರೀ ಐದನೇ, ಸುಪ್ರಿತಾ ಪೂಜಾರ್ ಏಳನೇ ರ‍್ಯಾಂಕ್ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಫೆ.೨೪ರ ಇಂದು ನಡೆಯುವ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ ೨೨ನೇ ಘಟಿಕೋತ್ಸವದಲ್ಲಿ ಪದಕ ಮತ್ತು ರ‍್ಯಾಂಕ್ ವಿತರಣೆ ಮಾಡಲಾಗುವುದು.

Leave a Reply

Your email address will not be published. Required fields are marked *

error: Content is protected !!