ತುಮಕೂರಿನ ಪತ್ರಿಕಾ ವಿತರಕ ಕೃಷ್ಣಮೂರ್ತಿ ಹೆಗಡೆ ನಿಧನ..

ತುಮಕೂರು: ಹಿರಿಯ ಪತ್ರಿಕಾ ವಿತರಕ ಶ್ರೀ ಕೃಷ್ಣಮೂರ್ತಿ ಹೆಗಡೆ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನ ಹೊಂದಿದರು.

ಅವರಿಗೆ 64 ವರ್ಷ ವಯಸ್ಸಾಗಿತ್ತು,
ಕಳೆದು ನಾಲ್ಕು ದೇಶಕಗಳಿಗೂ ಅಧಿಕ ಕಾಲ ವಿವಿಧ ಪತ್ರಿಕೆಗಳ ತುಮಕೂರು ನಗರದ ವಿತರಕ ರಾಗಿದ್ದ ಇವರು
ಪತ್ನಿ ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೂಲತಃ ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಯವರಾಗಿದ್ದು ಹಲವಾರು ದಶಕ ಗಳಿಂದ ತುಮಕೂರಿನಲ್ಲಿ ನೆಲೆಸಿದರು.

ಪತ್ರಿಕಾ ಏಜೆಂಟಾ ರಾಗಿ ಸೇವೆ ಸಲ್ಲಿಸಿದ್ದ ಇವರು ,ನಂತರ ಹಲವಾರು ಪತ್ರಿಕೆ ಗಳ ವಿತರಕರಾಗಿ , ರಾಷ್ಟ್ರೀಯಸ್ವಯಂಸೇವಕ ಸಂಘದಲ್ಲಿ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಇವರ ಪಾರ್ಥಿವ ಶರೀರವನ್ನು ಕೆಲ ಕಾಲ ರಾಷ್ಟ್ರೀಯ
ಸ್ವಯಂಸೇವಕ ಸಂಘ (ಆರ್ .ಎಸ್ .ಎಸ್ )ಕಚೇರಿಯ ಕೋತಿ ತೋಪಿನ ಸಾಧನದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು.

ಇವರ ಪಾರ್ಥಿವ ಶರೀರ ವನ್ನು ಅಂತಿಮ ಸಂಸ್ಕಾರಕ್ಕೆಅವರ ಹುಟ್ಟುವರಾದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಗೆ ಕೊಂಡಯ್ಯಲಾಯಿತು.

ಅಲ್ಲಿ ಅಂತಿಮ ಸಂಸ್ಕಾರಗಳು ನಡೆಯಲಿವೆ .
ನೂರಾರು ಸಂಖ್ಯೆಯಲ್ಲಿ ಆರ್ .ಎಸ್ .ಎಸ್ .ಕಾರ್ಯಕರ್ತರು ,ಪತ್ರಕರ್ತರು ,ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಸಂತಾಪ, ಪತ್ರಿಕಾ ವಿತರಕ ತುಮಕೂರಿನ ಕೃಷ್ಣಮೂರ್ತಿ ಹೆಗಡೆಯವರ ನಿಧನಕ್ಕಾಗಿ ತುಮಕೂರು ನಗರದ ಪತ್ರಿಕಾ ವಿತರಕರ ಸಂಘ  ಸಂತಾಪಸೂಚಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!