ಉಳ್ಳಾಲ : ಹೃದಯಾಘಾತದಿಂದ ಪತ್ನಿ ನಿಧನ: ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಆತ್ಮಹತ್ಯೆ
ಉಳ್ಳಾಲ : ಹೃದಯಾಘಾತದಿಂದ ಪತ್ನಿ ನಿಧನರಾದ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಕೂಡ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆಯ ಗ್ರಾಮಚಾವಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಗ್ರಾಮ ಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಮತ್ತು ಅವರ ಪತಿ ಶೇಷಪ್ಪ ಪೂಜಾರಿ(63) ಎಂದು ಗುರುತಿಸಲಾಗಿದೆ.
ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮೀನಾಕ್ಷಿ ಅವರ ಸ್ಥಿತಿ ಗಂಭಿರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.
ಮರುದಿನ ಸಂಜೆ ಶೇಷಪ್ಪ ಆವರು ಮನೆಗೆ ಆಗಮಿಸಿದ್ದ ಸಂದರ್ಭ ಮೀನಾಕ್ಷಿ ಅವರ ಸಾವಿನ ಸುದ್ಧಿಯನ್ನು ಸಂಬಂಧಿಕರೊಬ್ಬರು ತಿಳಿಸಿದ್ದರು. ಮನೆಯಲ್ಲಿ ಶೇಷಪ್ಪ ಅವರು ಕೀಟನಾಶಕವನ್ನು ಕುಡಿದಿದ್ದು, ಪಕ್ಕದ ಅಂಗಡಿಯವರು ಮತ್ತು ಸಂಬಂಧಿಕರು ಕೀಟನಾಶಕವನ್ನು ಎಳೆದು ತೆಗೆದರೂ ಅದಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ದಂಪತಿಗಳಿಗೆ ಮಕ್ಕಳಿಲ್ಲದ ಕೊರಗು ಕೂಡ ಇತ್ತು ಎನ್ನಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.