ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಗೆ ಅಂಕುಶ ನೀಡಿ, ಸರ್ಕಾರಿ ಶಾಲೆಗಳ‌ ಉಳಿವಿಗೆ ಕೈ ಜೋಡಿಸಿ

ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಗೆ ಅಂಕುಶ ನೀಡಿ, ಸರ್ಕಾರಿ ಶಾಲೆಗಳ‌ ಉಳಿವಿಗೆ ಕೈ ಜೋಡಿಸಿ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಹಾಗೂ ಗೋಪನಾಳ್ ಗ್ರಾಮದಲ್ಲಿರುವ ಸರ್ಕಾರಿ ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಯಲ್ಲಿದ್ದು ಸಂಭಂದಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ವಸತಿ ಶಾಲಾ ಕಟ್ಟಡಗಳ ಬಗ್ಗೆ ಕ್ರಮ ವಹಿಸುವ ಕೆಲಸ ಮಾಡಬೇಕಿದೆ.

ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಗೆ ಅಂಕುಶ ನೀಡಿ, ಸರ್ಕಾರಿ ಶಾಲೆಗಳ‌ ಉಳಿವಿಗೆ ಕೈ ಜೋಡಿಸಿ

ಯಾವುದೇ ಸಂದರ್ಭದಲ್ಲಿ ಮೇಲ್ಚಾವಣಿ ಕುಸಿದು ಬೀಳುವ ಆತಂಕದಲ್ಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಕಟ್ಟಡ 25 ವರ್ಷಕ್ಕಿಂತ ಹಳೆಯದಾಗಿದ್ದು , ಶಿಕ್ಷಕರು ಉಳಿಯಲು ಯಾವುದೇ ವಸತಿ ಕಟ್ಟಡ ಇರುದಿಲ್ಲ. ಶಾಲೆ ರಸ್ತೆ ಬದಿ ಇರುವುದರಿಂದ ಮಕ್ಕಳು ಓಡಾಡಲು ಶಾಲಾ ಆವರಣದಲ್ಲಿ ವಿಧ್ಯುತ್ ಸಂಪರ್ಕ ಇದ್ದು ಸರಿಯಾದ ನಿರ್ವಹಣೆ ಇಲ್ಲದೆ ಕತ್ತಲೆಯಿಂದ ಕೂಡಿದೆ ,
ಸಿಸಿಟಿವಿ ಕ್ಯಾಮರ ಇದ್ದರೂ ಕೆಲಸ ನಿರ್ವಹಿಸದೆ ಬಿದ್ದಿರುವುದು, ಮಕ್ಕಳಿಗಾಗಿ ವರ್ಷಗಳಿಂದ ಸುಮಾರು 15-20 ಕಂಪ್ಯೂಟರ್ ಗಳಿದ್ದು ಮಕ್ಕಳಿಗೆ ಕಲಿಸಲು ಶಿಕ್ಷಕರಿಲ್ಲದಿರುವುದು, ಕ್ರೀಡೆ ಕಲಿಸಲು ದೈಹಿಕ ಶಿಕ್ಷಕರ ಕೊರತೆ ಇದ್ದು ಕಂಪ್ಯೂಟರ್ಗಳು , ಪ್ರೊಜೆಕ್ಟರ್ಗಳು ಇದೆ ಆದರೆ ಇಂಟರ್ನೆಟ್ ವ್ಯವಸ್ಥೆಗಳಿಲ್ಲದೆ ಬೀಳು ಬಿದ್ದಿದೆ, ಪೋಷಕರು ಮಕ್ಕಳನ್ನು ಸಂಪರ್ಕಿಸಲು ದೂರವಾಣಿಯ ಕೊರತೆ ಇದ್ದು ಮಕ್ಕಳು ತಮ್ಮ ಕುಟುಂಬದವರ ಜೊತೆ ಮಾತನಾಡಲು ಕಷ್ಟ ಎದುರಿಸುತ್ತಿದ್ದಾರೆ ತಕ್ಷಣ ಶಾಲೆಯಲ್ಲಿ ದೂರವಾಣಿ ಸಂಪರ್ಕ ಒದಗಿಸುವ ಕೆಲಸ ಮಾಡಬೇಕಿದೆ.

ವಾಲ್ಮಿಕಿ ಆಶ್ರಮ ಶಾಲೆಯು ದುಸ್ಥಿತಿಗೆ ಅಂಕುಶ ನೀಡಿ, ಸರ್ಕಾರಿ ಶಾಲೆಗಳ‌ ಉಳಿವಿಗೆ ಕೈ ಜೋಡಿಸಿ

 

ಸದ್ಯ ಅಸ್ತಾಪನಹಳ್ಳಿಯ ವಸತಿ ಶಾಲೆಗಳಲ್ಲಿ 1ನೇ ತರಗತಿಯಿಂದ 5 ತರಗತಿ ವರೆಗೆ 125 ವಿಧ್ಯಾರ್ಥಿಗಳಿದ್ದು 1 ಮುಖ್ಯಶಿಕ್ಷಕ 4 ಜನ ಸಹ ಶಿಕ್ಷಕರು. ಗೋಪನಾಳ್ ವಸತಿ ಶಾಲೆಯಲ್ಲಿ 75 ವಿಧ್ಯಾರ್ಥಿಗಳು 1ಮುಖ್ಯ ಶಿಕ್ಷಕ 3 ಸಹ ಶಿಕ್ಷಕರು 75 ವಿಧ್ಯಾರ್ಥಿಗಳನ್ನು 3 ಕೊಠಡಿಗಳಲ್ಲಿ ಒಗ್ಗೂಡಿಸಿ ಪಾಠ ಮಾಡುವ ಸಮಸ್ಯೆ ಎದುರಾಗಿದೆ ,ಒಟ್ಟು ಈ ವಸತಿ ಶಾಲೆಗಳಲ್ಲಿ 200 ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ,ಇನ್ನೂ ಹೆಚ್ಚಿನ ಮಕ್ಕಳು ಪ್ರವೇಶಾತಿಗಾಗಿ ಸಮಾರು 50 ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ , ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಶಾಲೆಯ ಸುತ್ತಲು ಆಟ ಆಡಲು ವ್ಯವಸ್ಥಿತವಾದ ಜಾಗ ಇಲ್ಲದಿದ್ದರೂ ಇಲಾಖೆ ಅಧಿಕಾರಿಗಳು ಮಾತ್ರ ಇಲ್ಲಿ ತನಕ ಸ್ಥಳಕ್ಕೆ ಭೇಟಿ‌ ಕೊಡದೆ ಬೇಜವಬ್ದಾರಿತನ‌ ತೋರಿಸಿದ್ದಾರೆ. ಇಲ್ಲಿಯ ಸಹ ಶಿಕ್ಷಕರಿಗೆ ವೇತನ ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ಸಿಗುತ್ತಿಲ್ಲ, ಸದ್ಯ ಈಗಲಾದ್ರು ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು‌ ಸರ್ಕಾರಿ ಶಾಲೆಗಳ‌ ಉಳಿವಿಗೆ ಕೈ ಹಾಕಬೇಕಾಗಿದೆ.

~ ಪುನೀತ್ ಕುಮಾರ್ ಆರ್
ರಾಜ್ಯಾಧ್ಯಕ್ಷರು . ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ

Leave a Reply

Your email address will not be published. Required fields are marked *

error: Content is protected !!