ಶ್ರೀ ಸೋಮೇಶ್ವರ ವಿದ್ಯಾಲಯದ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನಕ್ಕೆ ವಸಂತ ಕುಮಾರಿ ಚಾಲನೆ

ದಾವಣಗೆರೆ: ಶಾಲಾ ಮಟ್ಟದಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹಾಗೂ ಜ್ಞಾನದ ಕೌಶಲ್ಯ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ವಿಜ್ಞಾನ ವಿಭಾಗದ ಪರಿವೀಕ್ಷಕರಾದ ವಸಂತ ಕುಮಾರಿ ತಿಳಿಸಿದರು.
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ಶ್ರೀ ಸೋಮೇಶ್ವರ ವಿದ್ಯಾಲಯದ ಪೂರ್ವ ಪ್ರಾಥಮಿಕ ಹಂತದ ಮಕ್ಕಳಿಗೆ ನಡೆದ ವಸ್ತು ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಈ ವಿಷಯ ತಿಳಿಸಿದರು. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು, ಗಿಡಗಳನ್ನು ನೆಟ್ಟು ಬೆಳಸಬೇಕೆಂದು ಸಲಹೆ ನೀಡಿದರು, ಅಲ್ಲದೆ ಮಕ್ಕಳು ಪೋಷಕರು, ಹಾಗೂ ಶಿಕ್ಷಕರ ಸಲಹೆ, ಮಾರ್ಗದರ್ಶನ ಪಾಲಿಸಿ ಉತ್ತಮ ಪ್ರಜೆಗಳು ಹಾಗೂ ಸಾಧಕರಾಗಬೇಕೆಂದರು,
ಪಾಠದ ಜೊತೆ ಇಂಥ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಕಲಿಕಾ ಗುಣಮಟ್ಟ ಕೂಡ ಹೆಚ್ಚಾಗುತ್ತದೆ, ಮಕ್ಕಳಿಗೆ ಪ್ರಾಯೋಗಿಕವಾಗಿ ಹಲವು ವಿಷಯಗಳನ್ನ ಕಲಿಯಲು ಸಹಕರಿಯಾಗುತ್ತದೆ ಎಂದು ತಿಳಿಸಿದರು. ವಸ್ತು ಪ್ರದರ್ಶನದಲ್ಲಿ ಮಕ್ಕಳು ಮಾಡಿದ್ದ ಮಾದರಿಗಳು ಎಲ್ಲರ ಗಮನ ಸೆಳೆದವು.
ಈ ವೇಳೆ ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ ಎನ್ ರವರು, ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಾಯತ್ರಿ ಶ್ರೀಮತಿ ಮಾಲಾ ತೀರ್ಪುಗರರಾದ ನಾಗವೀಣಾ, ಲಕ್ಷ್ಮಿ,ತೇಜಸ್ವಿನಿ, ಅನಿತಾ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.