ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ನಿಯಮ ಉಲ್ಲಂಘಿಸಿದರೆ ದಂಡ, ಸೆರೆವಾಸ
ದಾವಣಗೆರೆ: ದಾವಣಗೆರೆಯಲ್ಲಿ ಮಾರ್ಚ್ 17 ರಿಂದ 24 ರವರೆಗೆ ಶ್ರೀದುರ್ಗಾಂಬಿಕಾ ದೇವಿ ಜಾತ್ರೆ ನಡೆಯಲಿದೆ. ಕರ್ನಾಟಕ ಪ್ರಾಣಿಬಲಿ ತಡೆ ಕಾಯ್ದೆ 1959 ರ ಮತ್ತು ನಿಯಮ 1963 ರ ಪ್ರಕಾರ ಜಾತ್ರಾ ಅವಧಿಯಲ್ಲಿ ಸಾರ್ವಜನಿಕ ದೇವಸ್ಥಾನ ಸ್ಥಳ, ಪೂಜಾ ಸ್ಥಳ ಹಾಗೂ ದೇವಸ್ಥಾನದÀ ಸುತ್ತಮುತ್ತಲ ಪ್ರದೇಶದಲ್ಲಿ ಪಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಕಲಂ (6) ರನ್ವಯ ದಂಡ ಮತ್ತು ಆರು ತಿಂಗಳು ಸೆರವಾಸ, ಕಲಂ (7)ರ ನಿಯಮದನ್ವಯ ಉಲ್ಲಂಘಿಸಿ ಯಾವುದೇ ವ್ಯಕ್ತಿಯನ್ನು ವಾರೆಂಟ್ ಇಲ್ಲದೆ ಪೊಲೀಸ್ ಇನ್ಸ್‍ಪೆಕ್ಟರ್ ರವರು ದಸ್ತಗಿರಿ ಮಾಡಲು ಅಧಿಕಾರವಿದೆ. ಜಾತ್ರೆಯಲ್ಲಿ ಪ್ರಾಣಿಬಲಿ ಕೊಡುವುದನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಈ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್.ಎಂ.ವಿ ತಿಳಿಸಿದ್ದಾರೆ.