ಜಿ.ಎಂ.ಹೆಚ್.ಪಿ.ಯು ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ

ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ಎಚ್ ಪಿ ಯು ಕಾಲೇಜಿನಲ್ಲಿ ಇದೇ ದಿನಾಂಕ 18ನೇ ಶನಿವಾರದಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನ ಹೆಸರಾಂತ ಎಂಪವರ್ಡ್ ಎಜು ಸಲ್ಯೂಷನ್ ಮತ್ತು ಡೈನೋಸ್ ಕಂಪನಿಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಅತ್ಯುತ್ತಮ ಶಾಲಾ ಪ್ರಶಸ್ತಿ ಮತ್ತು ಕ್ರಿಯಾತ್ಮಕ ವಿಷಯಗಳೊಂದಿಗೆ ಶಿಕ್ಷಣ ಸಬಲೀಕರಣಕ್ಕೆ ಕಾರಣವಾದ ಶಾಲಾ ಮುಖ್ಯಸ್ಥರುಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶೇಕಡ 100 ಫಲಿತಾಂಶ ಪಡೆದ ಶಾಲೆಗಳಿಗೆ ಅತ್ಯುತ್ತಮ ಶಾಲಾ ಪ್ರಶಸ್ತಿ ನೀಡಿ ಪ್ರಾಂಶುಪಾಲರು ಗಳಿಗೆ ಸನ್ಮಾನಿಸಲಾಯಿತು. ದಾವಣಗೆರೆ ಜಿಲ್ಲೆ ಜೊತೆಗೆ ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಶಾಲಾ ಮುಖ್ಯಸ್ಥರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಅಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನೆಯ ನಂತರ ” ಟುಡೇ ಅಂಡ್ ಟುಮಾರೋ” ಎಂಬ ವಿಷಯದ ಕುರಿತು ನುರಿತ ತಜ್ಞರಿಂದ ಉಪನ್ಯಾಸವನ್ನು ನೀಡಲಾಯಿತು. ಜಿಎಂ ಎಚ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ ವೆಂಕಟ ರಾಯುಡು ವಿ ಅತ್ಯುತ್ತಮ ಶಿಕ್ಷಣ, ಶಿಕ್ಷಣ ಸಬಲೀಕರಣ ಮತ್ತು ಕ್ರಿಯಾತ್ಮಕ ಬೋಧನೆ ಬಗ್ಗೆ ಉಪನ್ಯಾಸವನ್ನು ನೀಡಿದರು. ಮಧ್ಯಾಹ್ನದ ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಶಾಲಾ ಮುಖ್ಯಸ್ಥರು ಗಳು ತಮ್ಮ ತುಂಬು ಹೃದಯದ ಧನ್ಯವಾದಗಳು ಮೂಲಕ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ವೇಳೆ ಎಂಪವರ್ಡ್ ಎಜು ಸಲ್ಯೂಷನ್ ಮತ್ತು ಡೈನೋಸ್ ಕಂಪನಿಗಳ ಮುಖ್ಯಸ್ಥರುಗಳು ಸಹ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ಶಾಲಾ ಮುಖ್ಯಸ್ಥರುಗಳಿಗೆ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರಿಗೆ ಡಾ ವೆಂಕಟರರಾಯುಡು ವಿ ಹೃತ್ಪೂರ್ವಕವಾದ ಧನ್ಯವಾದವನ್ನು ಅರ್ಪಿಸಿದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!