ಮಕ್ಕಳನ್ನು ಶಾಲೆಗೆ ಆಕರ್ಷಿಸುವಂತಹ ಮಾರ್ಗಗಳನ್ನ ಹುಡುಕಬೇಕಾಗಿದೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ .

ಮಕ್ಕಳನ್ನು ಶಾಲೆಗೆ ಆಕರ್ಷಿಸುವಂತಹ ಮಾರ್ಗ

ಚಿತ್ರದುರ್ಗ :ಮಕ್ಕಳನ್ನು ಕನ್ನಡ ಶಾಲೆಗೆ ಸೆಳೆಯುವುದು ಮತ್ತು ಅವುಗಳನ್ನು ಉಳಿಸಿಕೊಳ್ಳುವ ಮಾರ್ಗೋಪಾಯಗಳನ್ನು  ಕಂಡುಹಿಡಿದುಕೊಳ್ಳಬೇಕು,  ಮಕ್ಕಳಿಲ್ಲದ ಸರ್ಕಾರಿ ಶಾಲೆ, ಅನುದಾನಿತ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರಬಾರದು, ಅದಕ್ಕಾಗಿ ಈಗಲೇ ಮಕ್ಕಳನ್ನು ಸೆಳೆಯುವ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಬೇಕು  ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ  ಉಪಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ  ಹೇಳಿದರು.
ಅವರು ಚಿತ್ರದುರ್ಗ ನಗರದ ಶ್ರೀ ಎ ಭೀಮಪ್ಪ ನಾಯಕ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ರೋಟರಾಕ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣದ ಮಹತ್ವ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದರು ..


ದೂರದೂರಿನಿಂದ  ಮಕ್ಕಳನ್ನು ಕರೆತಂದು, ಹಾಸ್ಟೆಲ್ ಗಳಲ್ಲಿ ಇರಿಸಿ, ಅವರಿಗೆ ಓದಲು ಪುಸ್ತಕ, ಊಟ, ಉಪಹಾರ, ಕಲಿಕಾ ಸಾಮಗ್ರಿಗಳನ್ನು ನೀಡಿ, ಪ್ರೀತಿ ಬಾಂಧವ್ಯದಿಂದ ನೋಡಿಕೊಂಡಾಗ ಮಾತ್ರ ಶಾಲೆಗಳಲ್ಲಿ ಮಕ್ಕಳು ಉಳಿದುಕೊಳ್ಳುತ್ತವೆ ಎಂದರು,
ಕೆಲವು ಶಾಲೆಗಳಲ್ಲಿ ಅತಿ ಹೆಚ್ಚು ಮಕ್ಕಳು, ಕೆಲವು ಶಾಲೆಗಳಲ್ಲಿ ಮಕ್ಕಳಿಲ್ಲದೆ ಇರುವುದು ಅಸಮಾನತೆಯ ಸಂಕೇತವಾಗಿದೆ. ವಿಜ್ಞಾನದ ಮುಖಾಂತರ ಕಲಿಕಾ ಸಮಸ್ಯೆಗಳನ್ನ ಬಗೆಹರಿಸಬೇಕು, ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತಹ ಮಾದರಿಗಳನ್ನು ಉಪಯೋಗಿಸಿಕೊಳ್ಳಬೇಕು  ಎಂದರು.
ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ರೇಖಮ್ಮ  ಅವರು ಮಾತನಾಡುತ್ತಾ  ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು ಸಹ ಅವರನ್ನು ಮುಂದೆ ತರುವ ಪ್ರಯತ್ನಗಳಾಗಬೇಕು, ಮೊದಲು ಮನುಷ್ಯನ ರೂಪದಲ್ಲಿ ಅವರಿಗೆ ಶಿಕ್ಷಣ ನೀಡಬೇಕು, ಮಾನವೀಯತೆ, ಇನ್ನೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುವುದರ ಬಗ್ಗೆ, ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕು ಎಂದರು.
ಬಡತನದಲ್ಲಿರುವ ಮಕ್ಕಳಿಗೆ ಸಹಾಯ ಹಸ್ತ ಚಾಚುವಂತಹ ಜನರು ಹೆಚ್ಚಾಗಬೇಕು ,ಬೀದಿಯಲ್ಲಿ, ಸ್ಲಂಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದು ತಂದು, ಅವರಿಗೆ ಉತ್ತಮ ಶಿಕ್ಷಣ ನೀಡಿ , ಉತ್ತಮ  ನಾಗರೀಕರನ್ನಾಗಿಸಿ  ಸಮಾಜಕ್ಕೆ ನೀಡಬೇಕಾದ್ದು ಶಾಲೆಯ ಕರ್ತವ್ಯ ಎಂದರು.


ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ಬಟ್ಟೆಯನ್ನು ವಿತರಿಸಲಾಯಿತು, ರೋಟರಾಕ್ಟ್ ಎಚ್.ಎಸ್ ರಚನಾ ಮತ್ತು ಎಚ್.ಎಸ್ ಪ್ರೇರಣ ವಿಜ್ಞಾನ ಗೀತೆಗಳನ್ನು ಹಾಡಿ ಮಕ್ಕಳನ್ನು ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಎಮ್. ಶಾಂತಪ್ಪ ಸರಸ್ವತಮ್ಮ ಟಿ ಆರ್ ಭಾಗ್ಯಮ್ಮ, ಎಲ್ಲಮ್ಮ , ಜರೀನಾ, ರೇಣುಕಾ, ಪದ್ಮಾವತಿ ಮತ್ತು ಹರ್ಷವರ್ಧನ್ ಭಾಗವಹಿಸಿದ್ದರು .

Leave a Reply

Your email address will not be published. Required fields are marked *

error: Content is protected !!