ದಾವಣಗೆರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಪ್ರಸನ್ನ ಬೆಳಕೇರಿ ಒತ್ತಾಯ

ದಾವಣಗೆರೆ, ಸ್ಮಾರ್ಟ್, ಸಿಟಿ, ಕಾಮಗಾರಿ, ತನಿಖೆ, ನಡೆಸುವಂತೆ, ಮುಖ್ಯಮಂತ್ರಿ, ಪ್ರಸನ್ನ ಬೆಳಕೇರಿ, ಒತ್ತಾಯ,

ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕಳೆದ 5 ವರ್ಷಗಳಲ್ಲಿ ನಡೆದಿರುವ ಎಲ್ಲಾ ದಾವಣಗೆರೆ ಸ್ಮಾರ್ಟ ಸಿಟಿ ಲಿಮಿಟೆಡ್ ಕಾಮಗಾರಿಗಳ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸುವಂತೆ ಪರಿಸರ ಪ್ರೇಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರೂ ಆದ ಪ್ರಸನ್ನ ಬೆಳಕೇರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ದಾವಣಗೆರೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಅವರು ಮನವಿ ಸಲ್ಲಿಸಿದ್ದಾರೆ.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಡೆದಿರುವ Installation of Signage’s & Road Saftey Audit ಹಾಗೂ ಇ-ಟಾಯ್ಲೆಟ್ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡಿದ್ದು, ಇನ್ನು ಹಲವು ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದಾಗಿ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ಮಾರ್ಟ ಸಿಟಿ ಯೋಜನೆ, ದಾವಣಗೆರೆಯಲ್ಲಿ ದಾರಿ ತಪ್ಪಿದಂತಿದೆ. ಸಾಕಷ್ಟು ಮುತುವರ್ಜಿಯಿಂದ ನಡೆಯಬೇಕಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಲವು ಅಕ್ರಮಗಳೊಂದಿಗೆ ನಡೆಯುತ್ತಿವೆ. ದಾವಣಗೆರೆ ಸ್ಮಾರ್ಟ್‌ ಸಿಟಿ ವತಿಯಿಂದ ನಡೆಯುತ್ತಿರುವ ಬಹುತೇಕ ಕಾಮಗಾರಿಗಳಲ್ಲಿ ಸಾಕಷ್ಟು ಲೋಪವಾಗುತ್ತಿದೆ ಈ ಬಗ್ಗೆ ನಾವು ಹಲವು ದೂರುಗಳನ್ನು ನೀಡುತ್ತಿದ್ದರೂ ಸಹ ಯಾವುದೇ ಸ್ಪಂದನೆ ದೊರೆಯಲಿಲ್ಲ.

ಸ್ಮಾರ್ಟ ಸಿಟಿ ವತಿಯಿಂದ ನಡೆದಿರುವ “Installation of Signage’s & Road Saftey Audit” ಕಾಮಗಾರಿ, ಇ-ಟಾಯ್ಲೆಟ್ ಕಾಮಗಾರಿ, ಇ-ಆಟೋ ಕಾಮಗಾರಿ, ಪಬ್ಲಿಕ್ ಬೈಸಿಕಲ್ ಶೇರಿಂಗ್ ಕಾಮಗಾರಿ, ನಗರ ಹಸರೀಕರಣ ಕಾಮಗಾರಿ, ಸ್ಮಾರ್ಟ ಕ್ಲಾಸ್ ಕಾಮಗಾರಿ, ಕುಂದುವಾಡ ಕೆರೆ ಕಾಮಗಾರಿ ಇನ್ನು ಅನೇಕ ಕಾಮಗಾರಿಗಳಲ್ಲಿ ಸಾಕಷ್ಟು ಲೋಪವಾಗಿದೆ. ಕಾಮಗಾರಿಯ ಪ್ರಾರಂಭ ಹಂತದಿಂದ ಪ್ರತಿ ಹೆಜ್ಜೆಗಳಲ್ಲಿ ಲೋಪಗಳು ಇರುತ್ತವೆ. ಈ ಬಗ್ಗೆ ಹತ್ತು ಹಲವು ದೂರುಗಳನ್ನು ವ್ಯಯಕ್ತಿಕವಾಗಿ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಹಲವು ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆಯುತ್ತಿದೆ.

Installation of Signage’s & Road Saftey Audit ಕಾಮಗಾರಿ ಹಾಗೂ ಇ-ಟಾಯ್ಲೆಟ್ ಅಳವಡಿಕೆಯ ಕಾಮಗಾರಿಯಲ್ಲಿ ಸಾಕಷ್ಟು ಅಕ್ರಮ ನಡೆಸಲಾಗಿದ್ದು, ದಾಖಲಾತಿಗಳೊಂದಿಗೆ ಈ ಬಗ್ಗೆ ನಾವು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದೆವು. ಅದರಂತೆ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಹಲವು ನಕಲಿ ದಾಖಲೆಗಳನ್ನು ನೀಡಿದವರಿಗೆ ಟೆಂಡರ್ ನೀಡಲಾಗಿರುತ್ತದೆ. ಕಾಮಗಾರಿ ಸರಿಯಗಿ ನಡೆಯದಿದ್ದರೂ ಸಹ ಕಾಮಗಾರಿ ಬಿಲ್‌ ಗಳನ್ನು ನೀಡಲಾಗಿದೆ ಈ ಬಗ್ಗೆ ಎಲ್ಲಾ ಗೊತ್ತಿದ್ದರೂ ಸಹ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡಿರುತ್ತಾರೆ. ಆದ್ದರಿಂದ ಕಳೆದ 5 ವರ್ಷಗಳಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!