ದಾವಣಗೆರೆ ಅಧಿಕಾರಿಗಳ ಜೊತೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವರಿಂದ ಪ್ರಗತಿ ಪರಿಶೀಲನಾ ಸಭೆ

ದಾವಣಗೆರೆ :  ದಾವಣಗೆರೆಯಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ, ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ  ಜೊಲ್ಲೆ ಆಗಮಿಸಿ ತುಂಗಭದ್ರ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನೆಡೆಸಿದರು.

ಈ ಸಭೆಯಲ್ಲಿ ಕೊರೋನ ಮೂರನೇ ಅಲೆ ಏನಾದರು ಬಂದರೆ ಅದರಲ್ಲೂ ತಜ್ಞರ ಸೂಚನೆಯಂತೆ ಮಕ್ಕಳಿಗೆ ಬರಬಹುದು ಎನ್ನವ ಕಾರಣದಿಂದ ಮುಂಜಾಗೃತವಾಗಿ ಜಿಲ್ಲಾಡಳಿತ ಜಿಲ್ಲೆಯದ್ಯಂತ ಸಜ್ಜಾಗಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಭಂಧಪಟ್ಟ ಆಧಿಕಾರಿಗಳು ತಿಳಿಸಿದರು

ಈ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಸಂಸದರಾದ ಜಿ ಎಂ ಸಿದ್ದೇಶ್ವರ್. ಶಾಸಕರಾದ ಎಸ್ ಎ ರವೀಂದ್ರನಾಥ, ಜಗಳೂರಿನ ಶಾಸಕರಾದ ಎಸ್ ವಿ ರಾಮಚಂದ್ರಪ್ಪ. ಮಾಯಕೊಂಡ ಶಾಸಕರಾದ ಲಿಂಗಣ್ಣ , ಜಿಲ್ಲಾಧಿಕಾರಿಗಳಾದ ಮಹಾಂತೇಶ ಬಿಳಾಗಿ, ಜಿಲ್ಲಾ ಪೋಲಿಸ ವರಿಷ್ಟಧಿಕಾರಿಗಳಾದ ರಿಷ್ಯಂತ್ , ಸಿಇಓ ವಿಜಯ್ ಮಹಂತೇಶ ಸೇರಿದಂತೆ ಇಲಾಖೆಯ ಆಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!