ದಾವಣಗೆರೆ ಸೇರಿ 4 ಜಿಲ್ಲೆಗಳ ಎಲ್ಲಾ ರೀತಿಯ ಅಂಗಡಿಗಳು ತೆರೆಯಬಹದು ಆದರೆ ಕಂಡಿಷನ್ ಅಪ್ಲೈ: ಸರ್ಕಾರದಿಂದ ನೂತನ ಆದೇಶ

ದಾವಣಗೆರೆ: ಸೋಂಕು ಸೊಂಕು ತುಸು ಹೆಚ್ಚಿರುವ ನಿರ್ಬಂಧಿತ ಲಾಕ್ಡೌನ್ ಹೊಂದಿರುವ ಆಯ್ದ ಜಿಲ್ಲೆಗಳಲ್ಲಿ ವ್ಯಾಪಾರ ಚಟುವಟಿಕೆಗೆ ನೀಡಿದ್ದ ಅವಧಿಯಲ್ಲಿ ಒಂದು ತಾಸು ಮೊಟಕುಗೊಳಿಸಿ ಸರ್ಕಾರ ಆದೇಶಿಸಿದೆ.

ಮೊನ್ನೆಯಷ್ಟೇ ಜೂ.21 ರಿಂದ ಜು.5 ರವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ವ್ಯಾಪಾರ ಚಟುವಟಿಕೆಗೆ ದಾವಣಗೆರೆ ಸೇರಿ 13 ಜಿಲ್ಲೆಗಳಿಗೆ ಅವಕಾಶ ನೀಡಿ ಆದೇಶಿಸಿದ್ದ ಸರ್ಕಾರ. ಈಗ ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಸ್ತುತ ಕೊವಿಡ್ ಸೊಂಕಿನ ಪರಿಸ್ಥಿತಿಯನ್ನು ಅವಲೋಕಿಸಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಎಲ್ಲಾ ರೀತಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ ನೀಡಿರುವುದಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ ತಿಳಸಿದ್ದಾರೆ.

ನಾಳೆಯಿಂದ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳಲ್ಲಿ ಹವಾನಿಯಂತ್ರಿತ ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್ ಗಳನ್ನ ಹೊರತುಪಡಿಸಿ ಬೆಳಗ್ಗೆ 6 ಗಂಟೆಯಿಂದ 1 ಗಂಟೆಯವರೆಗೆ ಅನುಮತಿ ನೀಡಿ ಆದೇಶಿಸಿದೆ.   ಈ ಹಿಂದೆ ಜೂನ್ 19, 20, ಹಾಗೂ 21 ರಂದು ಆದೇಶವನ್ನ ಮುಂದುವರಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!