ಹೊನ್ನಾಳಿ ಮಲ್ಲಿಕಾರ್ಜುನ ಸ್ವಾಮಿ ರವರಿಗೆ ಜಾನಪದ ಕಲಾ ಭೂಷಣ ರಾಜ್ಯ ಪ್ರಶಸ್ತಿ.

ಹೊನ್ನಾಳಿ ಮಲ್ಲಿಕಾರ್ಜುನ ಸ್ವಾಮಿ ರವರಿಗೆ ಜಾನಪದ ಕಲಾ ಭೂಷಣ ರಾಜ್ಯ ಪ್ರಶಸ್ತಿ.

ಹೊನ್ನಾಳಿ :  ಹೊನ್ನಾಳಿ ಯು ರಂಗಭೂಮಿ ನಟ ಮತ್ತು ಜಾನಪದ ಕಲಾವಿದ, ಚಲನಚಿತ್ರ ಗಳು ಸಹ ನಟರಾದ ಮಲ್ಲಿಕಾರ್ಜುನ ಸ್ವಾಮಿ ರವರಿಗೆ ಜಾನಪದ ಕಲಾ ಭೂಷಣ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ರಾಗಿದ್ದಾರೆ.

ಪತಂಜಲಿ ಜಾನಪದ ಕಲಾ ಕೇಂದ್ರ ಕಡೂರು,ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಶಿವಮೊಗ್ಗ ಹಾಗೂ ಪ್ರೇಮಜ್ಯೋತಿ ಮಹಿಳಾ ಮಂಡಳಿಗಳ ಒಕ್ಕೂಟ ಕಡೂರು ಇವರ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಯುವ ಜನ ಮೇಳದಲ್ಲಿ ಮಲ್ಲಿಕಾರ್ಜುನ ಸ್ವಾಮಿ ರವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಹೊನ್ನಾಳಿ ಮಲ್ಲಿಕಾರ್ಜುನ ಸ್ವಾಮಿ ಸುಮಾರು 20ವರ್ಷಗಳ ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿ ಹಲವಾರು ಬೀದಿ ನಾಟಕಗಳಲ್ಲಿ ಅಭಿನಯಿಸಿ ಶಿಕ್ಷಣ, ಸಾಮಾಜಿಕ ಕಳಕಳಿ ಸಮಾಜದ ಹಲವು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲಾಜಾಥಗಳಲ್ಲಿ ಪಾಲ್ಗೊಂಡು ಪರಿಣಾಮ ಬೀರುವ ರಂಗನಾಟಕಗಳ ಮೂಲಕ ಕಲಾಸೇವೆ ಅನುಭವಿಕ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೊನ್ನಾಳಿ ಖ್ಯಾತ ರಂಗಭೂಮಿ ಕಲಾ ಸಂಸ್ಥೆ ಅಭಿವ್ಯಕ್ತಿ ಕಲಾತಂಡದ ಸಹ ಕಲಾವಿದನಾಗಿ ರಂಗ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಂತರ ಇಲ್ಲಿನ ರೂಪದರ್ಶಿ ಕಲಾತಂಡದ ಮುಖ್ಯಸ್ಥ ರಾಗಿ ಆರೋಗ್ಯ, ಏಡ್ಸ್ ಜಾಗೃತಿ, ಸ್ವಚ್ಚ ನೈರ್ಮಲ್ಯ ಅರಿವು, ಮತದಾರರ ಜಾಗೃತಿ ಮೂಡಿಸುವ ನಾಟಕಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿಕಲಾ ಪ್ರದರ್ಶನ ಮಾಡಿರುವ ಇವರು ಚೆನ್ನಪ್ಪ ಸ್ವಾಮಿ ಕಲಾಸಂಘ ಚಕಾಸಂ ನಾ ಮುಖ್ಯ ಕಲಾವಿದರಾಗಿ ಅಭಿನಯಿಸಿದ ಕಾಲಜ್ಞಾನಿ ಕನಕ ನಾಟಕ ರಾಜ್ಯಾದ್ಯಂತ ಪ್ರದರ್ಶನ ನೀಡಿ ಖ್ಯಾತಿ ಪಡೆದಿದೆ.

ದೂರದರ್ಶನ ಚಂದನ ಸೇರಿದಂತೆ ಹಲವು ಧಾರಾವಾಹಿ ಸಿನಿಮಾಗಳಲ್ಲಿ ಗಳಲ್ಲಿ ಸಹನಟರಾಗಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದು ದಾವಣಗೆರೆ ಇಪ್ಟಾ ಕಲಾತಂಡ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಸ್ವಾಮಿ ರವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ಉತ್ತಮ ಕಲಾವಿದನಿಗೆ ಸಂದ ಪ್ರಶಸ್ತಿ ಎಂದು ದಾವಣಗೆರೆ ಇಪ್ಟಾ ಕಲಾತಂಡದ ರಾಜ್ಯ ಸದಸ್ಯ ಪತ್ರಕರ್ತ ಪುರಂದರ್ ಲೋಕಿ ಕೆರೆ, ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಅಭಿನಂದಿಸಿವೆ.

Leave a Reply

Your email address will not be published. Required fields are marked *

error: Content is protected !!