ದಾವಣಗೆರೆ ವಿವಿಯಲ್ಲಿ ಯೋಗ ದಿನಾಚರಣೆ.

ದಾವಣಗೆರೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದಾವಣಗೆರೆ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಯೋಗ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಯೋಗ ಪ್ರದರ್ಶನ ಮತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆದರ್ಶ ಯೋಗ ಶಿಕ್ಷಣ ಸಂಸ್ಥೆಯ ಡಾ. ರಾಘವೇಂದ್ರ ಗುರೂಜಿ, ಯೋಗಾಭ್ಯಾಸ ಮಾಡಿಸಿ, ಹಲವು ಸುಲಭ ಪ್ರಾಣಾಯಾಮಗಳನ್ನು ಕಲಿಸಿದರು.

ನಂತರ ಮಾತನಾಡಿದ ಅವರು ಯೋಗ, ಪ್ರಾಣಾಯಾಮ ನಿತ್ಯ ಬದುಕಿನ ನಿಯಮಗಳಾದಾಗ ಆರೋಗ್ಯ ಚೈತನ್ಯಭರಿತವಾಗಿರುತ್ತದೆ. ದೇಹ ಮತ್ತು ಮನಸ್ಸನ್ನು ಸುಸ್ಥಿರವಾಗಿಡಲು ಸಹಾಯಕ ಎಂದರು.

ಕೆಲಸದ ಒತ್ತಡದ ನಡುವೆ ದಿನಕ್ಕೆ ಅರ್ಧಗಂಟೆ ಯೋಗ, ಪ್ರಾಣಾಯಾಮಕ್ಕೆ ಮೀಸಲಿಡುವುದು ಸೂಕ್ತ ಎಂದು ಹೇಳಿದರು.
ಕುಲಪತಿ ಪ್ರೊ. ಪಿ.ಲಕ್ಷ್ಮಣ, ಕುಲಸಚಿವೆ ಬಿ.ಬಿ.ಸರೋಜಾ, ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್.ಅನಿತಾ, ಡೀನ್ ಗಳಾದ ಪ್ರೊ.ರಾಮಲಿಂಗಪ್ಪ, ಡಾ.ಕೆ.ವೆಂಕಟೇಶ, ಡಾ. ಗಾಯತ್ರಿ ವೈದ್ಯ ಉಪಸ್ಥಿತರಿದ್ದರು. ಯೋಗ ವಿಜ್ಞಾನ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ. ಶಿವವೀರಕುಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!