ಮದ್ಯ ಕರ್ನಾಟಕ ರಾಜಕಾರಣದ ಗಂಡುಗಲಿ ಸಂಸದ ಸಿದ್ದಣ್ಣ ಒಮ್ಮೆ ಸಿ ಎಂ ಆಗಲಿ – ಬಾಡದ ಆನಂದರಾಜ್

ದಾವಣಗೆರೆ: ಭೀಮನ ಹೊಟ್ಟೆಯಲ್ಲೇ ಭೀಮನೇ ಹುಟ್ಟುತ್ತಾನೆ. ಅನ್ನೋದಕ್ಕೆ ಭೀಮಸಮುದ್ರದ ಭೀಮ, ದಾವಣಗೆರೆ ಸಂಸದ ಸಿದ್ದೇಶ್ವರ ಸಾಕ್ಷಿ! ದಾವಣಗೆರೆ
ಮಾವಿನ ವಾಟೆಯಿಂದ ಮಾವಿನ ಹಣ್ಣು ಹುಟ್ಟುವಂತೆ, ಭೀಮನ ಹೊಟ್ಟೆಯಲ್ಲಿ ಭೀಮನೇ ಹುಟ್ಟುತ್ತಾನೆ. ಅದೇ ರೀತಿ ಭೀಮಸಮುದ್ರದ ಭೀಮ ಅಂತಲೇ ಜನಪ್ರಿಯರಾಗಿದ್ದ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಿಕೊಟ್ಟ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ನವರ ಹಿರಿಯ ಪುತ್ರ, ದಾವಣಗೆರೆ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಧ್ಯ ಕರ್ನಾಟಕದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದವರು.
ಒಬ್ಬ ಸಂಸದರೆಂದರೆ ಹೇಗಿರಬೇಕೆಂದು ತೋರಿಸಿಕೊಟ್ಟವರು ದಿವಂಗತ ಜಿ.ಮಲ್ಲಿಕಾರ್ಜುನಪ್ಪ. ಸಂಸದ ಎಂಬ ಪದವನ್ನು ಮತ್ತಷ್ಟು ಜನರ ಹತ್ತಿರಕ್ಕೆ ತಂದವರು ಸತತ ೪ನೇ ಬಾರಿಗೆ ಬಿಜೆಪಿ ಸಂಸದರಾಗಿ ಆಯ್ಕೆಯಾದ ಡಾ.ಜಿ.ಎಂ.ಸಿದ್ದೇಶ್ವರ.

ಕಾಂಗ್ರೆಸ್ಸಿನ ಭದ್ರ ಕೋಟೆ ಅಂತಾ ಕರೆಯಲ್ಪಡುತ್ತಿದ್ದ ನೂತನ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲವಾಗಿ ಬೇರೂರುವಂತೆ ಮಾಡುವಲ್ಲಿ ದಿವಂಗತ ಜಿ.ಮಲ್ಲಿಕಾರ್ಜುನಪ್ಪ, ಉತ್ತರ ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಜೊತೆಗೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ.
ಆಡು ಮುಟ್ಟದ ಸೊಪ್ಪಿಲ್ಲ, ಸಂಸದ ಜಿ.ಎಂ.ಸಿದ್ದೇಶ್ವರ ಕಾಲಿಡದ ಕ್ಷೇತ್ರದ ಗ್ರಾಮ ಇಲ್ಲವೆಂಬಂತೆ ತಮ್ಮ ತಂದೆಯವರು ೨ ಸಲ ಸಂಸದರಾಗಿದ್ದಾಗ, ತಾವು ಸಂಸದರಾದ ನಾಲ್ಕನೇ ಸಲ ಹೀಗೆ ಒಟ್ಟು ೬ ಸಲ ಬಿಜೆಪಿ ಸಂಸದರಿದ್ದಾಗಲೂ ಒಂದೇ ಒಂದು ಹಳ್ಳಿಯನ ಬಿಡದೇ ಸುತ್ತಾಡಿದ, ಬಹುತೇಕ ಗ್ರಾಮಸ್ಥರ ಜೊತೆಗೆ ನೇರ ಸಂಪರ್ಕ ಹೊಂದಿರುವ ವ್ಯಕ್ತಿತ್ವ ಸಂಸದ ಸಿದ್ದೇಶ್ವರದ್ದು. ದಾವಣಗೆರೆ ಜಿಲ್ಲೆಯ ಹಂತ ಹಂತದ ಬೆಳವಣಿಗೆಯಲ್ಲಿ ಸಂಸದ ಸಿದ್ದೇಶ್ವರರ ಕೊಡುಗೆಯೂ ಸಾಕಷ್ಟು ಇದೆ. ಕೇಂದ್ರ, ರಾಜ್ಯ ಸರ್ಕಾರ ಹೀ ಗೆ ಯಾವುದೇ ಕಡೆಯಿಂದ ಜಿಲ್ಲೆಗೆ ಅನುದಾನ, ಯೋಜನೆ ತರುವುದಿದ್ದರೂ ಸದಾ ಸಿದ್ದೇಶ್ವರರದ್ದು ಒಂದು ಕಾಲು ಮುಂದೆ ಇರುವಂತಹ ಅಭಿವೃದ್ಧಿ ಪರ ಕಾಳಜಿಯ ಜನಪ್ರತಿನಿಧಿಯ ವ್ಯಕ್ತಿತ್ವವಾಗಿದೆ.

`ದಿಲ್ಲಿಗೂ ಜೈ, ಹಳ್ಳಿಗೂ ಸೈ’ ತಂದೆ ಆದರ್ಶವೇ ಸಿದ್ದೇಶ್ವರಗೆ ಶ್ರೀರಕ್ಷೆಯಾಗಿದೆ. ಬರೀ ದಿಲ್ಲಿಗೆ ಹೋಗಿ ಬರೋದಷ್ಟೇ ಅಲ್ಲ, ಹಳ್ಳಿ ಸುತ್ತಾಡಬೇಕೆಂದೂ ತೋರಿಸಿಕೊಟ್ಟ ತಂದೆ-ಮಗನಿಂದಾಗಿ ಸಂಸದ ಸ್ಥಾನವೆಂದರೆ ಏನೆಂಬುದನ್ನು ದಾವಣಗೆರೆ ಜಿಲ್ಲೆಗೆ ತೋರಿಸಿಕೊ
ಟ್ಟಿದ್ದಾರೆ. ನೆರೆಯ ಚಿತ್ರದುರ್ಗ ಜಿಲ್ಲೆ ಭೀಮಸಮುದ್ರ ಗ್ರಾಮ ತನ್ನ ವ್ಯಾಪಾರ ವಹಿವಾಟಿನಿಂದಲೇ ದೇಶದಲ್ಲೇ ಹೆಸರು ಮಾಡಿದೆ. ನೂರಾರು ಕೋಟಿ ರು.ಗಳ ಅಡಿಕೆ ವ್ಯಾಪಾರ ವಹಿವಾಟು ನಡೆಯುವ ವಾಣಿಜ್ಯ ಗ್ರಾಮವಿದು. ಇಂತಹ ಪುಟ್ಟ ಗ್ರಾಮದ ವ್ಯಾಪಾರದ ಜೊತೆಗೆ ರಾಜಕೀಯವಾಗಿಯೂ ಹೆಸರಾಗಿದೆ. ಇದೇ ಗ್ರಾಮದ ಗೌಡರ ಮನೆತನವಾದ ಅಜಾತಶತ್ರು ಹಾಗೂ ದಾವಣಗೆರೆ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಎಂದೇ ಹೆಸರಾಗಿರುವ ಜಿ.ಮಲ್ಲಿಕಾರ್ಜುನಪ್ಪ, ನಂತರ ಜಿ.ಎಂ.ಸಿದ್ದೇಶ್ವರ ಹೆಸರು ಜನಜನಿತ.

ಕೃಷಿ, ವ್ಯಾಪಾರ, ಉದ್ಯಮ, ಶಿಕ್ಷಣ ಹೀಗೆ ತಮ್ಮಷ್ಟಕ್ಕೆ ತಾವು ಸಕ್ರಿಯರಾಗಿದ್ದ ದಿವಂಗತ ಜಿ.
ಮಲ್ಲಿಕಾರ್ಜುನಪ್ಪ ಬಿಜೆಪಿಯ ಹಿರಿಯ ನಾಯಕರ ಒತ್ತಡಕ್ಕೆ ಮಣಿದು ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಪ್ರಮುಖ ವಾಣಿಜ್ಯ, ಕೈಗಾರಿಕಾ ನಗರಿಯಾಗಿದ್ದ ದಾವಣಗೆರೆಗೆ ಯಾವ ಕ್ಷಣದಲ್ಲಿ ರಾಜಕೀಯ ಪ್ರವೇಶ ಮಾಡಿದರೋ ಇಡೀ ಜಿಲ್ಲೆಯ ರಾಜಕಾರಣದ ಚಿತ್ರಣವೇ ಬದಲಾಯಿತು. ಆ ನಂತರ ಅದಕ್ಕೆ ಮತ್ತಷ್ಟು ಶಕ್ತಿ ತುಂಬಿದವರು ಜಿ.ಮಲ್ಲಿಕಾರ್ಜುನಪ್ಪನವರ ಹಿರಿಯ ಪುತ್ರ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸತತ ೪ನೇ ಬಾರಿಗೆ ಗೆದ್ದು, ಸೋಲಿಲ್ಲದ ಸರದಾರನೆಂದು ಕರೆಸಿಕೊಳ್ಳುವ ಸಂಸದ ಜಿ.ಎಂ. ಸಿದ್ದೇಶ್ವರ್ ಇಚ್ಚಾಶಕ್ತಿ, ಬದ್ಧತೆ, ಅಭಿವೃದ್ಧಿ ಪರ ಚಿಂತನೆ ಇತರರಿಗೂ ಪ್ರೇರಣೆಯಾಗಿದೆ.

ದಿವಂಗತ ಜಿ.ಮಲ್ಲಿಕಾರ್ಜುನಪ್ಪ ೨ ಸಲ ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದವರು. ಕಾಂಗ್ರೆಸ್ಸಿನ ಭದ್ರಕೋಟೆಯನ್ನೇ ಛಿದ್ರ ಮಾಡಿ ಇಡೀ ರಾಜ್ಯವೇ ಇತ್ತ ತಿರುಗುವಂತೆ ಮಾಡಿದವರು ಜಿ.ಮಲ್ಲಿಕಾರ್ಜುನಪ್ಪ. ಅಂದು ಮಲ್ಲಿಕಾರ್ಜುನಪ್ಪ ಗೆಲುವಿನ ಹಿಂದೆ ಶ್ರಮಪಟ್ಟವರಲ್ಲಿ ಜಿ.ಎಂ.ಸಿದ್ದೇಶ್ವರ ಸಹ ಒಬ್ಬರು. ತಮ್ಮ ತಂದೆ ಸಂಸದರಾಗಿದ್ದಾಗ ಎಂದಿಗೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಪಕ್ಷ ಸಂಘಟನೆ ಹೊಣೆ ಹೊತ್ತ ಸಿದ್ದೇಶ್ವರ ಅದರಂತೆ ಜಿಲ್ಲಾದ್ಯಂತ ಎಸ್.ಎ.ರವೀಂದ್ರನಾಥ್ ಜೊತೆಗೂಡಿ ಪಕ್ಷಕ್ಕೆ ಭದ್ರ ಬು
ನಾದಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮೊದಲ ಗೆಲುವು ತಂದು ಕೊಟ್ಟ ದಾಖಲೆ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರಿಗೆ ಸಲ್ಲುತ್ತದೆ. ತಂದೆ ಗೆಲುವಿನ ಓಟವನ್ನು ಮುಂದುವರಿಸಿಕೊಂಡು, ಸತತ ೪ ಸಲ ಗೆದ್ದ ಸಿದ್ದೇಶ್ವರ ಮತ್ತೊಂದು ಮೈಲುಗಲ್ಲನ್ನೇ ಕ್ಷೇತ್ರದಲ್ಲಿ ಸಾಧಿಸಿದ್ದಾರೆ.
ಕಿರಿಯರಿಂದ ಹಿರಿಯವರೆಗೆ ಎಲ್ಲರೊಂದಿಗೂ ಸರಳ, ಸಜ್ಜನಿಕೆ, ಸನ್ನಡತೆಯಿಂದ ಬೆರೆಯುತ್ತಿದ್ದ ಜಿ.ಮಲ್ಲಿಕಾರ್ಜುನಪ್ಪ ಹಾಕಿಕೊಟ್ಟ ಮಾರ್ಗದಲ್ಲೇ ಇಂದಿಗೂ ಜಿ.ಎಂ.ಸಿದ್ದೇಶ್ವರ ಸಾಗುತ್ತಿದ್ದಾರೆ. ಸಂಸದರೆಂದರೆ ದಿಲ್ಲಿಗೆ ಹೋಗಿ, ಬರೋದಷ್ಟೇ ಸಂಸದರ ಕೆಲಸ ಎಂಬುದಾಗಿ ತಿಳಿದಿದ್ದ ಕಾಲ ಇತ್ತು. ಆದರೆ, ಜಿ.ಮಲ್ಲಿಕಾರ್ಜುನಪ್ಪ ಅದನ್ನು ಸುಳ್ಳಾಗಿಸಿ, ದಿಲ್ಲಿಗೂ ಸೈ, ಹಳ್ಳಿಗೂ ಜೈ ಎಂಬುದಾಗಿ ಕ್ಷೇತ್ರದಲ್ಲಿ ಸುತ್ತಾಡಿ ಜನರೊಂದಿಗೆ ಬೆರೆತವರು. ಅದೇ ಪರಂಪರೆಯನ್ನು ಮುಂದುವರಿಸಿದ ಸಂಸದ ಜಿ.ಎಂ.ಸಿದ್ದೇಶ್ವರ ದೆಹಲಿಗೆ ಹೋಗಿ ಬರುತ್ತಿದ್ದಂತೆ ಇಡೀ ಕ್ಷೇತ್ರ ಸುತ್ತಾಡುವಂತಹ ಸಂಸದರಾಗಿದ್ದಾರೆ.

ಸತತ ೪ನೇ ಬಾರಿಗೆ ಆಯ್ಕೆಯಾದ ಸಂಸದ ಸಿದ್ದೇಶ್ವರ ಸುತ್ತದ, ಭೇಟಿ ನೀಡದ ಹಳ್ಳಿ ಸಹ ದಾವಣಗೆರೆ ಜಿಲ್ಲೆಯಲ್ಲಿ ಇಲ್ಲ. ಹೀಗೆ ಕ್ಷೇತ್ರಾದ್ಯಂತ ಪ್ರವಾಸ ಮಾಡಿ, ಜನಾನುರಾಗಿ ಸಂಸದರಾಗಿರುವುದೇ ಸಿದ್ದೇಶ್ವರ ಜನ ಮನ್ನಣೆಗೆ ಸಾಕ್ಷಿಯಾಗಿದೆ.ದಾವಣಗೆರೆಯಲ್ಲಿದ್ದರಂತೂ ದಿನವಿಡೀ ಸಾರ್ವಜನಿಕರನ್ನು ಭೇಟಿ ಮಾಡಲು ಮುಕ್ತ ಅವಕಾಶವಿರುತ್ತದೆ. ಕ್ಷೇತ್ರದ ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಸ್ಥಳದಲ್ಲೇ ಆಗುವ ಕೆಲಸವಾಗಿದ್ದರೆ ಅದಕ್ಕೆ ಸ್ಪಂದಿಸುವ, ಆಗದ ಕೆಲಸವಾಗದಿದ್ದರೆ ಅದನ್ನು ಮನವರಿಕೆ ಮಾಡಿಕೊಡುವುದನ್ನು ಸಿದ್ದೇಶ್ವರ ೪ನೇ ಬಾರಿ ಸಂಸದರಾದರೂ ಮರೆತಿಲ್ಲ. ರೈತ ಪರ, ಜನ ಪರ ಹೀಗೆ ಎಲ್ಲರ ಬಗ್ಗೆಯೂ ಕಳಕಳಿ ಹೊಂದಿರುವ ಸಿದ್ದೇಶ್ವರ ಏತ ನೀರಾವರಿ ಯೋಜನೆ, ನೀರಿನ ವಿಚಾರದಲ್ಲಿ ಸದಾ ರೈತರ ಪರ ಚಿಂತನೆ ಮಾಡುವಂತಹವರಾಗಿದ್ದಾ
ರೆ. ಅವಶ್ಯಕತೆ ಬಿದ್ದರೆ ರೈತರು, ಜನರ ಬೇಡಿಕೆ ಒಳಗೊಂಡ ಮನವಿ, ಕಡತ ಹಿಡಿದು, ವಿಧಾನಸೌಧ, ಲೋಕಸಭೆ ಹೀಗೆ ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಿಕೊಡುವವರೆಗೂ ಬಿಡದಂತಹ ಗಟ್ಟಿ ಪಟ್ಟು ಹಾಕುವ ಜನ ಪ್ರತಿನಿಧಿಯಾಗಿ ಗಮನ ಸೆಳೆಯುತ್ತಾರೆ.

ಅನಾವಶ್ಯಕ ಚರ್ಚೆಗಳಿಗೆ ಅವಕಾಶ ಇಲ್ಲ, ಗುಂಪುಗಾರಿಕೆ ಇಲ್ಲ, ಹಿಂಬಾಲಕರ ಪಡೆ ಇರದ ಸಂಸದ ಜಿ.ಎಂ.ಸಿದ್ದೇಶ್ವರ ಬಳಿ ಜನ ಸಾಮಾನ್ಯರು ನೇರ ಹೋಗಿ ತಮ್ಮ ಅಹವಾಲು ಸಲ್ಲಿಸಬಹುದು. ಯಾರೇ ಹೋಗಿದ್ದರೂ ನೇರವಾಗಿ ವಿಷಯಕ್ಕೆ ಬನ್ನಿ ಎನ್ನುವ ಮೂಲಕ ಬಂದವರ ಸಮಯವನ್ನೂ ವ್ಯರ್ಥ ಮಾಡದಷ್ಟು ಕಳಕಳಿ ಸಿದ್ದೇಶ್ವರ ಮೈಗೂಡಿಸಿಕೊಂಡಿದ್ದಾರೆ. ಇನ್ನು ರಾಜಕಾರಣವೆಂದರೆ ಸೇವೆಯೆಂದೇ ಭಾವಿಸಿ, ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಸಿದ್ದೇಶ್ವರ ಸಾಧನೆಯ ಹಿಂದೆ ಇಡೀ ಕುಟುಂಬವೇ ಬೆನ್ನೆಲುಬಾಗಿ ನಿಂತಿದೆ. ಭೀಮಸಮುದ್ರದ ಅಡಿಕೆ ಮಂಡಿಯಿಂದ ಸಂಸತ್ತಿನ ಅಂಗಳದವರೆಗೂ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಬದ್ಧತೆ, ಕಳಕಳಿ, ಸರಳತೆಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅವರಿಗಿಂದು ಎಪ್ಪತ್ತನೇ ಹುಟ್ಟು ಹಬ್ಬದ ಸಂಭ್ರಮಕ್ಕೆ ಎಲ್ಲಾ ಹಿಂದುಳಿದ ವರ್ಗಗಳ ಮುಖಂಡ ಬಾಡದ ಆನಂದರಾಜ್ ರವರಿಂದ ಶುಭಾಶಯಗಳು

Leave a Reply

Your email address will not be published. Required fields are marked *

error: Content is protected !!