‘ನಮೋ’ ಶ್ರೇಯಸ್ಸಿಗಾಗಿ ತುಳುನಾಡಿನಲ್ಲಿ ಯಾಗ.! ಧರ್ಮಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿಗಾಗಿ ಮೃತ್ಯುಂಜಯ ಕೈಂಕರ್ಯ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಯಸ್ಸಿಗಾಗಿ, ಅವರ ಆಯುಷ್ಯ ಗಟ್ಟಿತನಕ್ಕಾಗಿ ತುಳುನಾಡಿನ ಜನರು ದೇವರ ಮೊರೆಹೋಗಿದ್ದಾರೆ. ಈ ಸಂಬಂಧ ದಕ್ಷಿಣ ಭಾರತದ ಪುರಾಣ ಪ್ರಸಿದ್ದಾ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮೃತ್ಯುಂಜಯ ಯಾಗ ನಡೆದಿದೆ.

ಪ್ರಧಾನಿಯ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗ ನೆರವೇರಿಸಿದ ಅಭಿಮಾನಿಗಳು ದೇಶವನ್ನು ಆವರಿಸಿರುವ ಆತಂಕ ದೂರವಾಗುಂತೆಯೂ ಪ್ರಾರ್ಥಿಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಮುಂದಾಳತ್ವದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಪೂಜಾ ಕೈಂಕರ್ಯಗಳಿಗೆ ಪ್ರಾಯಃಕಾಲವೇ ನಾಂದಿ ಹಾಡಲಾಯಿತು. ಚರ್ತುವೇದ ಪಾರಯಾಣ, ಗೋಪೂಜೆ, ಮಹಾಗಣಪತಿ ಹೋಮದ ಬಳಿಕ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.

ಕೆ,ಸಿ ನಾಗೇಂದ್ರ ಭಾರದ್ವಾಜ್ ಮಾರ್ಗದರ್ಶನದಲ್ಲಿ ಯಾಗದಿ ಕಾರ್ಯ ನೆರವೇರಿದ್ದು, ಈ ಕೈಂಕರ್ಯ ದೇಶದ ಗಮನಕೇಂದ್ರೀಕರಿಸಿತು.

Leave a Reply

Your email address will not be published. Required fields are marked *

error: Content is protected !!