‘ಮಾನವೀಯತೆ’ ನಾಟಕವಾಡಿದ ಯುವಕರು.!ದವನ ಕಾಲೇಜಿನಿಂದ ಬೀದಿ ನಾಟಕ.!

ದಾವಣಗೆರೆ: ‘ಮಾನವೀಯತೆ’ ಡ್ರಾಮವಾಡಿದ ದವನ ಕಾಲೇಜಿನ ವಿದ್ಯಾರ್ಥಿಗಳು : ವೃದ್ಧರ ಕ್ಷೇಮಾಭಿವೃದ್ಧಿಗೆ ಈ ನಾಟಕ
ಬೀದಿ ನಾಟಕದ ಮೂಲಕ ಮನಸ್ಸು ಕರಗಿಸಿದ ಯುವಕರು.

ನೋಡೋದಕ್ಕೆ ದೊಡ್ಮನೆ, ಕೈ ತುಂಬಾ ಹಣ ಆದರೆ ಇರೋದು ವಿದೇಶದಲ್ಲಿ…ಅಲ್ಲಿಂದಲೇ ವಿಡಿಯೋ ಕಾಲ್, ಚೆನ್ನಾಗಿದ್ದೀರಾ, ಊಟ ಆಯ್ತಾಘಿ, ತಿಂಡಿ ಆಯ್ತಾ ಅಂತ ಕೇಳೋದನ್ನ ಬಿಟ್ಟರೇ…ಜತೆಗೆಯಿದ್ದುಘಿ, ಮಾತ್ರೆ ಕೊಟ್ಟು ಪ್ರೀತಿ ವಾತ್ಸಲ್ಯ ತುಂಬೋದಕ್ಕೆ ಮಕ್ಕಳಿಂದ ಸಾಧ್ಯಾಗುತ್ತಿಲ್ಲಘಿ. ಮಕ್ಕಳು ಇದ್ದರೂ, ಅನಾಥವಾಗುತ್ತಿದ್ದಾರೆ…ಕೆಲವೊಂದು ಪ್ರಕರಣದಲ್ಲಿ ವೃದ್ಧರು ಅನಾಥಶ್ರಮಕ್ಕೆ ಸೇರುತ್ತಿದ್ದಾರೆ. ವಯಸ್ಸಾದ ಮೇಲೆ ಅವರ ಪಾಡು ಹೇಳತೀರದ್ದಾಗಿದೆ…
ಹೌದು..ಇಂತಹ  ನೈಜ ಘಟನೆಯನ್ನು ನಗರದ ದವನ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಜನರಿಗೆ ತಿಳಿಸಿದರು. ಈ ನಾಟಕ ನೋಡಿದ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಅಲ್ಲದೇ ಕೆಲವರ ಕಣ್ಣಲ್ಲಿ ನೀರು ಬಂತು..ಚಿಕ್ಕವರಿದ್ದಾಗ ಒಂದು ನಿಮಿಷವೂ ಬಿಟ್ಟಿರದ ಅಪ್ಪ-ಅಮ್ಮನನ್ನು ದೊಡ್ಡವರಾದ ಮೇಲೆ ಪೋಷಕರನ್ನೇ ಕೈ ಬಿಟ್ಟು ಹಣಕ್ಕಾಗಿ ದೂರ ಹೋಗುತ್ತೇವೆ. ಕೆಲವರು ಅಪ್ಪ-ಅಮ್ಮನನ್ನು ಸರಿಯಾಗಿ ನೋಡಿಕೊಳ್ಳೋವುದೇ ಇಲ್ಲಘಿ..ಆಸ್ತಿಗಾಗಿ ಒಂದಿಷ್ಟು ವೃದ್ಧರನ್ನು ನೋಡಿಕೊಂಡರೆ, ಇನ್ನೂ ಹಲವರು ಅವರಲ್ಲಿರುವ ಹಣ ನೋಡಿ ನೋಡಿಕೊಳ್ಳುತ್ತಾರೆ. ಪರಿಣಾಮ ಬೇಸತ್ತ ವೃದ್ಧರು ವೃದ್ಧಾಶ್ರಮಕ್ಕೆ ಹೋಗುತ್ತಾರೆ…ಅಲ್ಲಿ ಜೀವನದ ಅಂತಿಮ ಕ್ಷಣಗಳನ್ನು ಕಳೆಯುತ್ತಾರೆ..ಮಕ್ಕಳಿದ್ದುಘಿ, ಅನಾಥರಾಗುತ್ತಾರೆ..ಇದು ಈ ನಾಟಕದ ತುಣಕಿನ ಕಥಾಸಾರಾಂಶ.

ಸ್ಪೂರ್ತಿ ಯುವಜನೋತ್ಸವ 2022ರ ಪ್ರಯುಕ್ತ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿಗಳು ಬಾಯ್ಸ್ ಹಾಸ್ಟೆಲ್ ರೋಡಿನ ರಾಕಿಂಗ್ ರೋವೆಲ್ ಹತ್ತಿರ ಮಾನವೀಯತೆ ವೌಲ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾಟಕ ಹಮ್ಮಿಕೊಂಡಿದ್ದರು. ವಯಸ್ಕರನ್ನು ನಾವು ಯಾವ ರೀತಿಯಲ್ಲಿ ಗೌರವಿಸಬೇಕು. ಅವರಿಗೆ ಯಾಕೆ ಗೌರವ ನೀಡಬೇಕು ಎಂಬುದರ ಕಿರು ಬೀದಿನಾಟಕದ ಮೂಲಕ ಜನರಿಗೆ ಅರಿವು ಮೂಡಿಸಿದರು. ಒಟ್ಟಾರೆ ಮಾನವೀಯತೆ ಮೌಲ್ಯಗಳನ್ನು ಯುವಕರು ಎತ್ತಿ ಹಿಡಿಯುವುದರ ಮೂಲಕ ಜನರ ಕಣ್ಣು ತೆರೆಸುವುದರ ಜೊತೆ ಮೆಚ್ಚುಗೆಗೆ ಪಾತ್ರರಾದರು. ಕಾಲೇಜಿನ ಹರ್ಷರಾಜ್ ಗುಜ್ಜರ ನಿರ್ದೇಶನ, ಎಚ್‌ಓಡಿ ಜಿ.ಬಿ.ಚಂದನ, ಉಪಪ್ರಾಂಶುಪಾಲೆ ಅನಿತ, ಕಲಾವಿದರಾದ ಎಸ್.ದರ್ಶನ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!