ಜಮೀರ್ ಅಹಮ್ಮದ್ ಮೊದಲು ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಲಾಠಿ ಹಿಡಿಯಲಿ – ರೇಣುಕಾಚಾರ್ಯ

ಹೊನ್ನಾಳಿ: ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲಾ, ಜಮೀರ್ ಅಹಮ್ಮದ್ ಸಿದ್ದರಾಮಯ್ಯನವರು ಮಾಜಿ ಸಿಎಂ ಅಲ್ಲಾ ಬಾವಿ ಸಿಎಂ ಎಂದು ಹೇಳುವ ಮೂಲಕ ತಿರುಕನ ಕನಸು ಕಾಣುತ್ತಿದ್ದು ಅವನೊಬ್ಬ ಗುಜರಿ ಗಿರಿಕಿ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಲೂಕಿನ ಅರಬಗಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮ್ಮದ್ ಸಿದ್ದರಾಮಯ್ಯ ಮಾಜಿ ಸಿಎಂ ಅಲ್ಲಾ ಬಾವಿ ಸಿಎಂ ಎಂದು ಹೇಳಿದ್ದು, ರಾಜ್ಯದಲ್ಲಿ ಇನ್ನೂ ಎರಡು ವರ್ಷ ಯಡಿಯೂರಪ್ಪನವರು ಸಿಎಂ ಆಗೀ ಮುಂದುವರೆಯಲಿದ್ದು, 2023 ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲಾ ಎಂದರು.

ಜಮೀರ್ ಅಹಮ್ಮದ್ ಮುಂದೆ ಶಾಸಕನಾಗುತೇನೆಂದು ನಿಮಗೆ ಗ್ಯಾರಂಟಿ ಇಲ್ಲಾ ಎಂದ ರೇಣುಕಾಚಾರ್ಯ, ಜಮೀರ್ ಅಹಮ್ಮದ್ ಕೋಮುವಾದಿ, ವಿಷ ಬೀಜ ಬಿತ್ತುವುದರಲ್ಲಿ ನೀನು ನಿಸ್ಸಿಮ ಎಂದರು.

ಯಡಿಯೂರಪ್ಪ ಸಿಎಂ ಆದರೇ ಅವರ ಮನೆಯ ವಾಚ್ ಮೆನ ಆಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದ ಜಮೀರ್ ಅಹಮ್ಮದ್ ಮೊದಲು ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಲಾಠಿ, ವಿಚಲ್ ಹಿಡಿದು ಕೊಂಡು ಯಡಿಯೂರಪ್ಪನವರ ಮನೆಯ ವಾಚ್‌ಮೆನ್ ಆಗಿ ಕೆಲಸ ಮಾಡಲಿ ಎಂದರು.

ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ ಎಂದ ರೇಣುಕಾಚಾರ್ಯ, ಸಿದ್ದರಾಮಯ್ಯನವರು ಹೊಗಳಿದರೆ ಮುಂದೆ ಏನೋ ಅವಕಾಶ ಸಿಗುತ್ತದೆ ಎಂದು ಅವರನ್ನು ಹೊಗಳು ಕೆಲಸ ಮಾಡುತ್ತಿದ್ದು 2023 ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!