ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ:ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಕೆ ಎಸ್ ಈಶ್ವರಪ್ಪ

ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಗಿದ ಹೋದ ಅಧ್ಯಾಯವಾಗಿದ್ದು, ಪಕ್ಷದ ವರಿಷ್ಠರು ಇದಕ್ಕೆ ತೆರೆ ಎಳೆದಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,
ಬಿಜೆಪಿ ಒಂದು ಕುಟುಂಬ ಇದ್ದಂತೆ, ಸಣ್ಣ ಪುಟ್ಟ ಸಮಸ್ಯೆ ಇದ್ದೇ ಇರುತ್ತೆವೆ ಅದು ಸಾಮಾನ್ಯ. ಬಹಿರಂಗವಾಗಿ ಯಾವುದೇ ವಿಚಾರ ಚರ್ಚೆ ಮಾಡಬಾರದು ಎಂದು ವರಿಷ್ಠರು ಕಟ್ಟಪಟ್ಟಣೆ ಮಾಡಿದ್ದಾರೆ. ಆದಾಗ್ಯೂ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೊನ್ನೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ನಡೆದ ಚರ್ಚೆಯಲ್ಲಿ ಕರೊನಾ ನಿಯಂತ್ರಣದ ಮತ್ತು ಯೋಗ ದಿನಾಚರಣೆ ಸಿದ್ದತೆ ಬಗ್ಗೆ ಚರ್ಚೆ ನಡೆದಿದೆ ಹೊರತು ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಯೂ ಆಗಿಲ್ಲ‌ ಎಂದು ತಿಳಿಸಿದರು.

ಕರೊನಾ ಹಿನ್ನೆಲೆಯಲ್ಲಿ ಕೇಂದ್ರದಿಂದ ನವೆಂಬರ್‌ವರೆಗೆ ಉಚಿತ‌ ರೇಷನ್ ವ್ಯವಸ್ಥೆ ಆಗಿದೆ. ಸೋಂಕಿನಿಂದ ಮೃತರಿಗೆ 1 ಲಕ್ಷ ರೂ., ಪರಿಹಾರ ಘೋಷಣೆ ಆಗಿದ್ದು, ರಾಷ್ಟ್ರದಲ್ಲಿ ಇತಿಹಾಸ ಸೃಷ್ಟಿಸಿದೆ ಎಂದರು.

ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,
ಕರೊನಾ ಅಲೆ ಸಂಪೂರ್ಣವಾಗಿ ಮುಗಿದಿಲ್ಲ ಹಾಗಾಗಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳು ಸದ್ಯಕ್ಕೆ ನಡೆಯುವುದಿಲ್ಲ. ಡಿಸೆಂಬರ್‌ವರೆಗೆ ಯಾವುದೇ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಾಕ್‌ಡೌನ್ ಮುಂದುವರಿಕೆ ಬಗ್ಗೆ ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!