ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಗಂಡನ ಕೊಲೆ, ಪತ್ನಿ ಬಂಧನ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಗಂಡನ ಕೊಲೆ, ಪತ್ನಿ ಬಂಧನ

ದಾವಣಗೆರೆ: ಹಳೇಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್ ಗ್ರಾಮದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣವನ್ನು ಹದಡಿ ಠಾಣೆ ಪೊಲೀಸರು ಭೇದಿಸಿದ್ದು, ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಹಳೇಬಿಸಲೇರಿ ಗ್ರಾಮದ ನಿವಾಸಿ ನಿಂಗರಾಜ (34) ಜೂನ್‌ 9ರ ರಾತ್ರಿ ಕೊಲೆಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ, ನಿಂಗರಾಜ ಅವರ ಪತ್ನಿ ಕಾವ್ಯ ಹಾಗೂ ಈಕೆಯ ಪ್ರಿಯಕರ, ವಿನೋಬನಗರದ ನಿವಾಸಿ ಬೀರೇಶ ಬಂಧಿತರಾಗಿದ್ದಾರೆ.

ನಿಂಗರಾಜ ಅವರ ಪತ್ನಿ ಕಾವ್ಯ, ಬೀರೇಶ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಹಿಂದೆ ಇಬ್ಬರೂ ಮಂಗಳೂರಿಗೆ ಓಡಿಹೋಗಿದ್ದರು. ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಕಾವ್ಯ ಪತ್ತೆಯಾದ ನಂತರ ಪ್ರಕರಣ ಅಂತ್ಯ ಕಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘ನನ್ನ ಮಗನನ್ನು ಕೊಲೆ ಮಾಡಲಾಗಿದೆ’ ಎಂದು ನಿಂಗರಾಜನ ತಾಯಿ ಶಿವಲಿಂಗಮ್ಮ ಜೂನ್ 10ರಂದು ದೂರು ನೀಡಿದ್ದರು.
ಅನೈತಿಕ ಸಂಬಂಧಕ್ಕೆ ನಿಂಗರಾಜ ಅಡ್ಡಿಪಡಿಸುತ್ತಾನೆ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಎಎಸ್‌ಪಿ ಕನ್ನಿಕಾ ಸಿಕ್ರಿವಾಲ್‌, ಮಾಯಕೊಂಡ ಸರ್ಕಲ್ ಇನ್‌ಸ್ಪೆಕ್ಟರ್‌ ನಾಗರಾಜು ನೇತೃತ್ವದಲ್ಲಿ ಪಿಎಸ್‌ಐಗಳಾದ ಸಂಜೀವ್‌ಕುಮಾರ್‌, ಶಕುಂತಲಾ, ಹೆಡ್‌ ಕಾನ್‌ಸ್ಟೆಬಲ್‌ ಕರಿಬಸಪ್ಪ, ಕಾನ್‌ಸ್ಟೆಬಲ್‌ಗಳಾದ ಶ್ರೀನಿವಾಸ, ಚನ್ನಬಸವ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!