ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಹಾಗಾದರೆ ಸೇವಿಸಿ , ಬೆಣ್ಣೆಹಣ್ಣು..( ಆವಕಾಡೊ)

ಆವಕಾಡೊ ಹಣ್ಣುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅವುಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇಲ್ಲಿದೆ ಓದಿ.

ಆವಕಾಡೊ ಹಣ್ಣನ್ನು ಬೆಣ್ಣೆ ಹಣ್ಣು ಎಂದು ಸಹ ಕರೆಯುತ್ತಾರೆ. ಈ ಆವಕಾಡೊಗಳು ಬಾಳೆಹಣ್ಣುಗಳಿಗಿಂತ ಹೆಚ್ಚು ಪೊಟ್ಯಾಶಿಯಮ್‌ ಅನ್ನು ಹೊಂದಿರುತ್ತವೆ. ಈ ಹಣ್ಣು ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಪೌಷ್ಟಿಕಾಂಶ ಭರಿತ ಹಣ್ಣುಗಳಲ್ಲಿ ಇದು ಕೂಡ ಒಂದಾಗಿದೆ.

ಇದರಲ್ಲಿರುವ ಪೊಟ್ಯಾಶಿಯಮ್‌ ರಕ್ತದಲ್ಲಿನ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಉತ್ತಮ ಸ್ನಾಯು ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.ವಿಶೇಷವಾಗಿ ಆವಕಾಡೊ ಸೂಪರ್ ಹಣ್ಣುಗಳಲ್ಲಿ ಒಂದಾಗಿದೆ.

ಒಂದು ಗ್ಲಾಸ್ ಆವಕಾಡೊ ಹಣ್ಣಿನ ಜ್ಯೂಸ್‌ ಸೇವನೆಯಿಂದ ಆರೋಗ್ಯದಲ್ಲಿ ಉಂಟಾಗುವ ಲಾಭಗಳ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

 

ಕಣ್ಣುಗಳ ಆರೋಗ್ಯಕ್ಕೆ ಉತ್ತಮ

 • ಆವಕಾಡೊಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
 • ಇದು ಲುಟೀನ್‌ ಮತ್ತು ಜಿಯಾಕ್ಸಾಂಥಿನ್‌ ಅನ್ನು ಹೊಂದಿರುತ್ತವೆ.
 • ದೃಷ್ಟಿ ದೋಷದಂತಹ ಸಮಸ್ಯೆಗೆ ಈ ಹಣ್ಣು ಪರಿಹಾರ ನೀಡುತ್ತದೆ.
 • ಆವಕಾಡೊದಲ್ಲಿರುವ ಉತ್ಕರ್ಷಣ ನಿರೋಧಕಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್‌ ಡಿಜೆನರೇಶನ್‌ ಮತ್ತು ಕುರುಡುತನದಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.
 • ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ಆವಕಾಡೊಗಳನ್ನು ಸೇವನೆ ಮಾಡುವುದರಿಂದ ಉತ್ತಮವಾದ ಕಣ್ಣುಗಳನ್ನು ಪಡೆಯಬಹುದು.

ಹೃದ್ರೋಗವನ್ನು ತಡೆಯುತ್ತದೆ

 • ಆವಕಾಡೊಗಳು ಪೋಷಕಾಂಶಗಳಿಂದ ತುಂಬಿದೆ.
 • ಇದರಲ್ಲಿ ಜೀವಸತ್ವಗಳು, ಖನಿಜಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್‌ಗಳನ್ನು ಹೊಂದಿದೆ.
 • ಹಾಗಾಗಿ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಹೃದ್ರೋಗದಂತಹ ಅಪಾಯದಿಂದ ಪಾರಾಗಬಹುದು ಎನ್ನಲಾಗಿದೆ.
 • ಅಲ್ಲದೆ, ಹೃದಯದ ರಕ್ತನಾಳದ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
 • ಉತ್ತಮ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ.
 • ಆವಕಾಡೊಗಳಲ್ಲಿ ಹೆಚ್ಚಿನ ಪೊಟ್ಯಾಶಿಯಮ್‌ ಮತ್ತು ಮೆಗ್ನೀಸಿಯಮ್‌ ಅಂಶವು ರಕ್ತದೊತ್ತವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.

ಮಧುಮೇಹಕ್ಕೆ ಒಳ್ಳೆಯದು

ಮಧುಮೇಹ ಹೊಂದಿರುವವರಿಗೆ ಕೆಲವು ಹಣ್ಣುಗಳು ಮತ್ತು ತರಕಾರಿಗಳಿಂದ ದೂರ ಉಳಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಆವಕಾಡೊಗಳು ಮಾತ್ರ ಮಧುಮೇಹ ಹೊಂದಿರುವವರಿಗೆ ಸಾಕಷ್ಟು ಶಕ್ತಿ ನೀಡುವ ಹಣ್ಣಾಗಿದೆ.

ಕೆಲವು ಸಂಶೋಧನೆಗಳ ಪ್ರಕಾರ, ಟೈಪ್‌ 2 ಮಧುಮೇಹವನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆಯನ್ನು ಶೇಖಡ 20 ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಹೇಳುವುದಾದರೆ ಆವಕಾಡೊ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಸಹಾಯಕಾರಿಯಾದ ಹಣ್ಣುಗಳಲ್ಲಿ ಒಂದಾಗಿದೆ.

Leave a Reply

Your email address will not be published. Required fields are marked *

error: Content is protected !!