ಆಟಆಡುವಾಗ ಚಾಕೊಲೇಟ್ ಎಂದು ಹಾವನ್ನೇ ಬಾಯಲ್ಲಿ ಹಾಕಿಕೊಂಡು 3 ವರ್ಷದ ಬಾಲಕ

ಲಕ್ನೋ :ಆಟವಾಡುವ ವೇಳೆ ಮೂರು ವರ್ಷದ ಮಗು ಚಾಕಲೆಟ್ ಅಂದುಕೊಂಡು ಹಾವನ್ನು ಹಿಡಿದು ಬಾಯಿಗೆ ಹಾಕಿಕೊಂಡ ಘಟನೆ ಉತ್ತರ ಪ್ರದೇಶದ ಫಾರುಖಾಬಾದ್‌ನಲ್ಲಿ ನಡೆದಿದೆ.
ಮೊಹಮದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮಡ್ನಾಪುರ ಗ್ರಾಮದಲ್ಲಿ ದಿನೇಶ್ ಕುಮಾರ್ ಎನ್ನುವ ವ್ಯಕ್ತಿಯ ಮೂರು ವರ್ಷದ
ಮಗುಹಾವನ್ನು ಜಗಿದಿದ್ದಾನೆ.
ಇದನ್ನು ನೋಡಿದ ಮನೆಯವರು ಮಗುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದರೊಂದಿಗೆ ಮಗುವಿನ ಬಾಯಿಯಿಂದ ಹೊರತೆಗೆದ ಸತ್ತ ಹಾವನ್ನೂ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಘಟನೆಯ ವಿವರ ಕೇಳಿದ ವೈದ್ಯರೂ ಕೂಡ ಮಗುವಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮನೆಯ ಸಮೀಪದ ಪೊದೆಯಿಂದ ಪುಟ್ಟ ಹಾವೊಂದು ಹೊರಬಂದು ಮಗುವಿನ ಮುಂದೆ ಬಂದಿತ್ತು. ಇದಾದ ಬಳಿಕ ಮಗು ತಮಾಷೆಯಾಗಿ ಹಾವನ್ನು ಬಾಯಿಯಲ್ಲಿ ಇಟ್ಟುಕೊಂಡು ಜಗಿಯುತ್ತಿತ್ತು. ಅಷ್ಟರಲ್ಲಿ ಮಗುವಿನ ಅಜ್ಜಿಯ ಕಣ್ಣು ಅವನ ಮೇಲೆ ಬಿತ್ತು.
ಆತನ ಕೈಯಲ್ಲಿದ್ದ ಹಾವನ್ನು ನೋಡಿ ಮಗುವಿನ ಅಜ್ಜಿ ಕಿರುಚಿಕೊಂಡಿದ್ದು, ಮಗುವಿನ ಕೈಯಿಂದ ಹಾವನ್ನು ತೆಗೆದು ಎಸೆದಿದ್ದಾರೆ. ಬಳಿಕ ಕುಟುಂಬಸ್ಥರು ತರಾತುರಿಯಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಮಗುವನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಿದ್ದಾರೆ.