ಕ್ರೈಂ ಸುದ್ದಿ

ಮಹಿಳೆಯರ ಗುದನಾಳದಲ್ಲಿತ್ತು 700 ಗ್ರಾಂ ಚಿನ್ನ

ಮಹಿಳೆಯರ ಗುದನಾಳದಲ್ಲಿತ್ತು 700 ಗ್ರಾಂ ಚಿನ್ನ

ರಾಜಸ್ಥಾನ : ವಿದೇಶಗಳಿಂದ ಬಂಗಾರ ತರಲು ಜನರು ಸಾಕಷ್ಟು ಕಳ್ಳಾಟಗಳನ್ನು ನಡೆಸುತ್ತಾರೆ. ಆದಾಗ್ಯೂ ಇವರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲಿ ಕೆಳಗೆ ನುಸಿಯತ್ತಾರೆ. ಅಂತಹ ಘಟನೆಯೊಂದು ಇಲ್ಲಿ ನಡೆದಿದೆ ನೋಡಿ.

ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಮಹಿಳೆಯರಿಂದ 700 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಮಹಿಳೆಯರು ಕ್ಯಾಪ್ಸೂಲ್ ರೂಪದಲ್ಲಿ ಚಿನ್ನವನ್ನು ತಮ್ಮ ಗುದನಾಳದಲ್ಲಿಟ್ಟುಕೊಂಡು ಪ್ರಯಾಣಿಸಿದ್ದರು.

ಪರಿಶೀಲನೆ ಸಂದರ್ಭದಲ್ಲಿ ಇದನ್ನು ಪತ್ತೆ ಮಾಡಿದ ಅಧಿಕಾರಿಗಳು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ 43.12ಲಕ್ಷ ಎಂದು ಅಂದಾಜು ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top