ಕಾರು ಬೈಕ್ ಗಳ ಮಧ್ಯೆ ಅಪಘಾತ; ಇಬ್ಬರು ಯುವಕರ ದುರ್ಮರಣ

ದಾವಣಗೆರೆ(ಚನ್ನಗಿರಿ):ಅಜ್ಜಿಹಳ್ಳಿ ಗ್ರಾಮದ ಬಳಿ ರಾಷ್ತ್ರಿಯ ಹೆದ್ದಾರಿ 12ರಲ್ಲಿ ಭಾನುವಾರ ರಾತ್ರಿ ಕಾರೊಂದು ಬೈಕ್ ಗೆ ಹಿಂಬದಿಹಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ನಿವಾಸಿಗಳಾದ ರಂಗನಾಥ್(26)ಹಾಗೂ ಶಶಿಧರ್ (27)ಮೃತರು.
ಈ ಇಬ್ಬರು ಚನ್ನಗಿರಿಯಿಂದ ಮಾವಿನಕಟ್ಟೆ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿರುವಾಗ ವೆಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬೈಕ್ ಚಾಲನೆ ಮಾಡುತ್ತಿದ್ದ ರಂಗನಾಥ್ ಸ್ಥಳದಲ್ಲಿಯೇ ಅಸುನೀಗಿದ್ದರೆ,
ತೀವ್ರವಾಗಿ ಗಾಯಗೊಂಡ ಶಶಿಧರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು.
ಅಪಘಾತ ಮಾಡಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.