ದಾವಣಗೆರೆ ಮಹಾನಗರಪಾಲಿಕೆ 2023 – 24 ನೇ ಆರ್ಥಿಕ ವರ್ಷಕ್ಕೆ 17.98 ಕೋಟಿ ಉಳಿತಾಯ ಬಜೆಟ್
ದಾವಣಗೆರೆ: ದಾವಣಗೆರೆ ಮಾಹಾನಗರ ಪಾಲಿಕೆಯ 2023-24 ನೇ ಆರ್ಥಿಕ ವರ್ಷಕ್ಕೆ ರೂ. 1791.08 ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಿದ ಸೋಗಿ ಶಾಂತ್ ಕುಮಾರ್.
ಫೆಬ್ರವರಿ 21 ರಂದು ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪಾಲಿಕೆ ಆಯವ್ಯಯದ ಸಭೆಯಲ್ಲಿ ಪಾಲಿಕೆಯ ಸದಸ್ಯರುಗಳು ಸರ್ವಾನುಮತದಿಂದ ಸದರಿ ಆಯವ್ಯಯಕ್ಕೆ ಅನುಮೋದನೆ ನೀಡಲು ಕೋರಲಾಯಿತು.
ಮಹಾನಗರ ಪಾಲಿಕೆಯ ಸರ್ವ ಸದಸ್ಯರು, ನಾಗರೀಕ ಬಂಧುಗಳು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಆಯ-ವ್ಯಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮತ್ತು ಅನುಷ್ಠಾನಗೊಳಿಸಲು ಸಹಕರಿಸಲು ಕೋರಿ ‘ಆಯ-ವ್ಯಯ ಮಂಡನೆಯ ಕಾರ್ಯವನ್ನು ಕೋರಲಾಯಿತು.