ಸಾಧನಾ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಸಾಹಿತಿ ಸೈಯದ್ ಕೋಗಲೂರು ರಚಿಸಿ ಬರೆದ 3 ಖನ ಪದಗಳು ಕೃತಿ ಲೋಕಾರ್ಪಣೆ

 

ದಾವಣಗೆರೆ: ಸಾಹಿತಿಗಳು ಲೇಖಕರು ತಾವು ಬರೆದಂತಹ ಕೃತಿಗಳನ್ನು ದೊಡ್ಡ ವೇದಿಕೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಜನಸಮೂಹ ಸೇರಿಸಿ ಮಂತ್ರಿಗಳೋ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಗುರುತಿಸಿಕೊಂಡವರಿಂದ ತಾವು ಬರೆದು ಪ್ರಕಟಿಸಿದಂತಹ ಕೃತಿಗಳನ್ನು ಲೋಕಾರ್ಪಣೆ ಮಾಡುವುದನ್ನು ನಾವು ನೋಡಿದ್ದೇವೆ ಇವೆಲ್ಲದರಿಂದ ವಿಭಿನ್ನವಾಗಿ ಸಾಹಿತ್ಯ ಸಹೃದಯಿ ಪ್ರೇಮಿಗಳಿಗೆ ಕೃತಿ ಪರಿಚಯಿಸಲು ರಾಜ್ಯ ಪ್ರಶಸ್ತಿ ಪುರಸ್ಕೃತಗೊಂಡ ಸಾಹಿತಿ ಸೈಯದ್ ಕೋಗಲೂರು ರಚಿಸಿ ಬರೆದಂತಹ 3.ಖನ ಪದಗಳು ಎಂಬ ಪದ್ಯ ಸಂಕಲನವನ್ನು “ಆದರ್ಶ ಜೀವನ ಮತ್ತು ಉತ್ತಮ ಸಮಾಜಕ್ಕಾಗಿ” ಎಂಬ ಆಡಿ ಬರಹದೊಂದಿಗೆ ಕೃತಿಯನ್ನು ದಾವಣಗೆರೆ ನಗರದ ತುರ್ಚಘಟ್ಟ ಗ್ರಾಮದ ಸಾಧನಾ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಹೀಗೂ ಪ್ರಚಾರವಿಲ್ಲದೇ ಪುಸ್ತಕ ಬಿಡುಗಡೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಈ ಕಾರ್ಯಕ್ರಮದ ನೇತೃತ್ವವಹಿಸಿದ್ದ ಸಾಧನಾ ಟ್ರಸ್ಟ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ.ಡಾ”ಪುಷ್ಪಲತಾ ಪವಿತ್ರಾರಾಜ್ ಸಾಹಿತ್ಯ ಸೇವೆಯಲ್ಲಿ 3ಖನ ಪದಗಳು ವಿಶೇಷವಾಗಿ ಸೈಯದ್ ಕೋಗಲೂರು ಅವರ ಕೈಬರಹದಲ್ಲಿ ಅದ್ಭುತವಾಗಿ ಮೂಡಿಬಂದಿದೆ ವಿಶೇಷವಾಗಿ ನಮ್ಮ ಅನಾಥಾಶ್ರಮದಲ್ಲಿ ಕೃತಿಯನ್ನು ಬಿಡುಗಡೆ ಭಾಗ್ಯ ಕಾಣುತ್ತಿರುವುದು ಹೆಮ್ಮೆಯೇನಿಸುತ್ತಿದೆ ಎಂದರು.

ಮುಖ್ಯಅಥಿತಿಗಳಾಗಿದ್ದ ದಾವಣಗೆರೆ ವಿ.ವಿ.ಯ ಉಪನ್ಯಾಸಕ ವೆಂಕಟೇಶ್ ಮಾತನಾಡಿ ಸಾಹಿತಿಗಳು ಮುಗ್ದ ಮೌಲ್ಯ ಮನಸ್ಸುಗಳ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆ ಮಾಡಿ ಸಮಾಜ ಸುಧಾರಣೆ ಸಮಾಜಮುಖಿ ಕೆಲಸವಾಗುತ್ತಿದೆ ಇವರ ಈ 3ಖನ, ಕೃತಿಗೆ ಕರ್ನಾಟಕ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನಪ್ರಯೋಗಕಂಡು”ರಾಜ್ಯಪ್ರಶಸ್ತಿ” ಪುರಸ್ಕಾರ ಪಡೆದ ಮೌಲ್ಯಾಧಾರಿತ ಕೃತಿಯಾಗಿದೆ ಎಂದರು ಈ ಕೃತಿಯನ್ನು ಇವರ ಪ್ರೀತಿಯ ಸಹೋದರ “ದಿ”. ಅನ್ವರ್ ಭಾಷಾನಿಗೆ ಅರ್ಪಿಸುತ್ತಾ ಇವರ ತಾಯಿ ಚಾಂದ್ ಬೀ ಹಾಗು ತಂದೆ ಅವರ ಅಮೃತಹಸ್ತಗಳಿಂದ ಲೋಕಾರ್ಪಣೆಗೊಲಿಸುವ ಮೂಲಕ ಓದುಗರ ಮಡಿಲಿಗೆ ಸಮರ್ಪಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಾಹಿತಿ ಸೈಯದ್ ಕೋಗಲೂರು ಪತ್ರಕರ್ತರಾದ ಅಸ್ಗರ್ ಭಾಷ.ಕೆ. ಉಪನ್ಯಾಸಕಾರದ ವೆಂಕಟೇಶ್ ಡಾ.ಪುಷ್ಪಲತಾ ಉಪಸ್ತಿತರಿದ್ದರು ಈ ಸಮಾರಂಭದಲ್ಲಿ ಸಾಹಿತಿಗಳು ಹಾಗು ಅವರ ಕುಟುಂಬದ ಸದಸ್ಯರು ಅನಾಥಾಶ್ರಮದ ನಿವಾಸಿಗಳಿಗೆ ಅನ್ನಸಂತರ್ಪಣೇ ಮಾಡಿದರು ಈ ಸಂದರ್ಭದಲ್ಲಿ ಸಾಧನಾ ಟ್ರಸ್ಟ್ ನ “ಡಾ”.ಪುಷ್ಪಲತಾರವರು ಸಾಹಿತಿಗಳಿಗೆ ನಿಲಯದ ವತಿಯಿಂದ ಸನ್ಮಾನಿಸಿದರು

Leave a Reply

Your email address will not be published. Required fields are marked *

error: Content is protected !!