ನೀರಲ್ಲಿ ಮುಳುಗಿ ಚುಂಬನದಲ್ಲಿ ದಾಖಲೆ ಸೃಷ್ಟಿಸಿದ ದಂಪತಿ

ಚುಂಬನ ದಾಖಲೆ ಸೃಷ್ಟಿಸಿದ ದಂಪತಿ

ಮಾಲ್ಡೀವ್ಸ್‌ : ಪ್ರೇಮಿಗಳಿಗೆ ಮುತ್ತೇ ಗಮ್ಮತ್ತು. ಅದರಲ್ಲೂ ಪ್ರೇಮಿಗಳ ದಿನದಂದು ಮುತ್ತಿಡದ ಪ್ರೇಮಿಯಾದರೂ ಸಿಕ್ಕಿಯಾರೇ? ಇಲ್ಲ ಅಲ್ಲವೇ? ಇನ್ನು ದಂಪತಿಗಳಾದರಂತೂ ನಿತ್ಯವೂ ಮುತ್ತಿನ ಮಾಲೆಯೇ…
ಇಲ್ಲಿ ನೋಡಿ ಈ ಜೋಡಿ ಕೇವಲ ಮುತ್ತಿಕ್ಕುವುದಷ್ಟೇ ಅಲ್ಲ. ಮುತ್ತಿನ ಮತ್ತಲ್ಲೇ ಗಿನ್ನಿಸ್ ದಾಖಲೆ ಮಾಡಿದೆ.
ಹೌದು, ಬೆತ್ ನೀಲ್ (ದಕ್ಷಿಣ ಆಫ್ರಿಕಾ) ಮತ್ತು ಮೈಲ್ಸ್ ಕ್ಲೌಟಿಯರ್ (ಕೆನಡಾ) ಎಂಬ ಜೋಡಿ ನೀರೊಳಗಿನ ಚುಂಬನದ ವಿಶ್ವ ದಾಖಲೆಯನ್ನು ಮುರಿದು ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ.
ಈ ದಂಪತಿ ನೀರಿನ ಕೊಳದಲ್ಲಿ ಮುಳುಗಿ 4 ನಿಮಿಷ 6 ಸೆಕೆಂಡುಗಳ ಕಾಲ ಚುಂಬಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ಹೇಳಿದೆ.
ಇದಕ್ಕೂ ಮೊದಲು 13 ವರ್ಷಗಳ ಹಿಂದೆ 3 ನಿಮಿಷ 24 ಸೆಕೆಂಡುಗಳ ಅವಧಿಯ ವರೆಗೆ ಚುಂಬಿಸಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಅದನ್ನು ಈ ದಂಪತಿ ಮುರಿದಿದ್ದಾರೆ.
ಮುಳುಗು ತಜ್ಞರಾಗಿರುವ ಇಬ್ಬರೂ, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಜೋಡಿಗೆ ನೆವ್ ಎಂಬ ಹೆಸರಿನ ಒಂದೂವರೆ ವರ್ಷದ ಮಗಳಿದ್ದಾಳೆ. ಗಿನ್ನಿಸ್‌ ದಾಖಲೆಗೆಂದೇ ಇಬ್ಬರೂ ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದರು. ಸೋಮವಾರ ಬೆಳಗ್ಗೆ 7.30ರಲ್ಲಿ ಈ ವಿಶ್ವದಾಖಲೆ ರಚನೆಯಾಯಿತು.

Leave a Reply

Your email address will not be published. Required fields are marked *

error: Content is protected !!