ದಾವಣಗೆರೆ: ಕಳೆದ ಶನಿವಾರ ಆನಗೋಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೈಕ್ ಅಪಘಾತದಲ್ಲಿ ಶ್ರೀರಾಮನಗರದ ಮೂವರು ಮೃತಪಟ್ಟ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಜೊತೆ ದರೋಡೆಗೆ ತೆರಳಿದ್ದ ಗಣೇಶ, ರಾಹುಲ್ ಮತ್ತು ಶಿವುಕುಮಾರ ಹಾಗೂ ಮೂವರ ಮೇಲೆ ಲಾರಿ ಹರಿಸಿ ಕೊಲೆ ಮಾಡಿದ ಲಾರಿ ಚಾಲಕ ಉತ್ತರ ಪ್ರದೇಶದ ಭೋಲೆ ಯಾದವ್ ಅವರುಗಳ್ನು ಬಂಧಿಸಲಾಗಿದೆ.
ಅಂದು ಶನಿವಾರ ಬೈಕ್‌ನಲ್ಲಿ ಪರಶುರಾಮ, ನಾಗರಾಜ, ಸಂದೇಶ, ಗಣೇಶ, ರಾಹುಲ್ ಮತ್ತು ಶಿವುಕುಮಾರ ಎರಡು ಬೈಕುಗಳಲ್ಲಿ ತೆರಳಿ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿದ್ದ ಚಾಲಕನನನ್ನು ಹೆದರಿಸಿ ಹಲ್ಲೆ ಮಾಡಿ, ಚಾಲಕನಿಂದ 8 ಸಾವಿರ ರೂ. ನಗದು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡಿದ್ದರು.
ದರೋಡೆ ಮಾಡಿ ತೆರಳುವಾಗ ಲಾರಿ ಚಾಲಕನು ಬೈಕುಗಳ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದರ ಪರಿಣಾಮ ಒಂದು ಬೈಕಿನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವಕುಮಾರ ಮತ್ತು ಸಂದೇಶ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಬೈಕ್‌ನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದವು.
ಇದೀಗ ಪೊಲೀಸರು ಉಳಿದ ಮೂವರು ದರೋಡೆಕೋರರು ಹಾಗೂ ದರೋಡೆಕೋರರ ಮೇಲೆ ಲಾರಿ ಹತ್ತಿಸಿದ ಚಾಲಕ ಉತ್ತರ ಪ್ರದೇಶದ ಭೋಲೆ ಯಾದವ್ ನನ್ನು ಹಾಗೂ ಲಾರಿಯನ್ನು ಚೆನ್ನೈನಿಂದ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ಹಾಜರು ಪಡಿಸಿದ್ದಾರೆ.
ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನು ಎಸ್ಪಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ.ಬಸರಗಿ ಪ್ರಶಂಸಿಸಿದ್ದಾರೆ.
