ಮಂಡ್ಯದಲ್ಲಿ ಮೋದಿಗೆ ಭರ್ಜರಿ ಸ್ವಾಗತ ಧನ್ಯವಾದ ಅರ್ಪಿಸಿದ ಪ್ರಧಾನಿ

ಮಂಡ್ಯದಲ್ಲಿ ಮೋದಿಗೆ ಭರ್ಜರಿ ಸ್ವಾಗತ ಧನ್ಯವಾದ ಅರ್ಪಿಸಿದ ಪ್ರಧಾನಿ

ಮಂಡ್ಯ :ಸಾವಿರಾರು ಜನರ ಜಯಘೋಷಗಳ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ನಗರದ ಪ್ರವಾಸಿ ಮಂದಿರದಿಂದ ನಂದ ಟಾಕೀಸ್‌ವರೆಗೆ 1.8 ಕಿ.ಮೀ ರೋಡ್‌ ಶೋ ನಡೆಸಿದರು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರು ಸಾಲುಗಟ್ಟಿ ನಿಂತಿದ್ದರು. ‘ಮೋದಿ ಮೋದಿ’ ಜಯಘೋಷ ಮೊಳಗಿಸಿದ ಜನ ಪ್ರಧಾನಿ ಮೇಲೆ ಹೂವಿನ ಮಳೆಗರೆದರು. ಶ್ವೇತವರ್ಣದ ಜುಬ್ಬಾ ಧರಿಸಿದ್ದ ನರೇಂದ್ರ ಮೋದಿ ಅವರು ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು, ತಮ್ಮ ಕಾರಿನ ಮೇಲೆ ಬಿದ್ದಿದ್ದ ಹೂವು ತೆಗೆದು ಜನರ ಮೇಲೆ ಎರಚಿ ಸಂಭ್ರಮಪಟ್ಟರು.

ಮಂಡ್ಯದ ರೋಡ್‌ ಶೋ ವಿಡಿಯೊ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಪುಷ್ಪವೃಷ್ಟಿಯೊಂದಿಗೆ ಅಪಾರ ಪ್ರೀತಿ ತೋರಿದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರೋಡ್‌ ಶೋ ವೇಳೆ ಜನ ತಮ್ಮ ಕಾರಿನತ್ತ ಹೂ ಮಳೆಗೈಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ಟ್ವೀಟ್‌ ಮಾಡಿರುವ ಈ ವಿಡಿಯೊಕ್ಕೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನೀವು ನಮ್ಮ ಹೆಮ್ಮೆಯ ಪ್ರಧಾನಿ ಎಂದಿರುವ ಹಲವಾರು ಅಭಿಮಾನಿಗಳು ಮಂಡ್ಯದ ರೋಡ್‌ ಶೋದ ಅನೇಕ ಚಿತ್ರಗಳನ್ನು ಮೋದಿ ಟ್ವೀಟ್‌ನ ಪ್ರತಿಕ್ರಿಯೆ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!