ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಹಾಲಿನ ಟೆಂಪೋ; ಬೀದಿಯಲ್ಲಿ ಹರಿದುಹೋದ ಹಾಲು..

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಹಾಲಿನ ಟೆಂಪೋ; ಬೀದಿಯಲ್ಲಿ ಹರಿದುಹೋದ ಹಾಲು..

ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಡಿ ಮಾರ್ಟ್ ಬಳಿಹಾಲಿನ ಟೆಂಪೋ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನದಲ್ಲಿದ್ದ ಅಪಾರ ಪ್ರಮಾಣದ ಹಾಲು ಮಣ್ಣು ಪಾಲಾಗಿದೆ.

ಸೋಮವಾರ ಬೆಳಂಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಚಾಲಕನ‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಹಾಲಿನ ಡಬ್ಬಗಳು ರಸ್ತೆಗೆ ಬಿದ್ದು ಅಪಾರ ಪ್ರಮಾಣದಲ್ಲಿ ಹಾಲು ನಷ್ಟವಾಗಿದೆ.

ಈ ಅಪಘಾತದಿಂದಾಗಿ ಸ್ಥಳದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಅಪಘಾತಕ್ಕೀಡಾದ ವಾಹನವನ್ಬು ಸ್ಥಳೀಯರು ಶ್ರಮ ಪಟ್ಟು ರಸ್ತೆವಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾದರು.

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಹಾಲಿನ ಟೆಂಪೋ; ಬೀದಿಯಲ್ಲಿ ಹರಿದುಹೋದ ಹಾಲು..ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ‌ ಸಂಭವಿಸಿಲ್ಲ. ಸದಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!