ದಾವಣಗೆರೆ: ಎ.ಆರ್ ಉಜ್ಜನಪ್ಪ ಅವರು ನೇರ ನಡೆ ನುಡಿಯ ಅಪ್ರತಿಮ ಸಂಘಟಕರಾಗಿದ್ದರು. “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಮಾತಿನಂತೆ ಎ.ಆರ್.ಉಜ್ಜನಪ್ಪನವರು ಕಾಲಿರಿಸದ ಕ್ಷೇತ್ರವೇ ಇಲ್ಲ ಎನ್ನಬಹುದು.
ಸರಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಲಯನ್ಸ್ ಕ್ಲಬ್, ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಂತೂ ಅವರ ಸೇವೆ ಅನುಪಮವಾದುದಾಗಿದೆ.
ಇಂದು ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ತಲೆಯೆತ್ತಿ ನಿಂತಿದೆ ಅಂತಾದರೆ ಅದರ ಹಿಂದೆ ಉಜ್ಜನಪ್ಪ ಅವರ ಶ್ರಮವೂ ಇದೆ. ಅಧ್ಯಕ್ಷ ಸ್ಥಾನದ ಅವಧಿ ಮುಗಿದ ಬಳಿಕವೂ ಅವರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅವಿಭಾಜ್ಯ ಅಂಗವಾಗಿದ್ದರು. ಅವರ ನಿಧನದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಂಬನಿ ಮಿಡಿದಿದ್ದಾರೆ.
ಕೆ.ರಾಘವೇಂದ್ರ ನಾಯರಿ
ಗೌರವ ಕೋಶಾಧ್ಯಕ್ಷ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ದಾವಣಗೆರೆ
ಮೊ: 9844314543
