ದಾವಣಗೆರೆ: ಚಿತ್ರದುರ್ಗದಲ್ಲಿ ಭೋವಿ ಗುರುಪೀಠದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭೋವಿ ಜನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರನ್ನು ದಾವಣಗೆರೆಯ ಬೋವಿ ಸಮಾಜದ ಹಿರಿಯ ಮುಖಂಡರಾದ ಬಿ.ಟಿ. ಸಿದ್ದಪ್ಪ ಹಾಗೂ ಯುವ ಮುಖಂಡರಾದ ಜಿ.ಎಸ್. ಶ್ಯಾಮ್ ಅವರು ಸನ್ಮಾನಿಸಿ ಗೌರವಿಸಿದರು.
25ನೇ ಲಾಂಛನ ದೀಕ್ಷಾ ಮಹೋತ್ಸವ, 14ನೇ ಪಟ್ಟಾಭಿಷೇಕ ಮಹೋತ್ಸವ, ಶ್ರೀಗಳ 38ನೇ ವಸಂತೋತ್ಸವ, ಭೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಭೋವಿ ಸಮಾಜದ ವಧು-ವರರ ಸಮಾಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಶ್ರೀಮಠದಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ. ಟಿ. ಸಿದ್ದಪ್ಪ ಮತ್ತು ಜಿ. ಎಸ್. ಶ್ಯಾಮ್ ಬೋವಿ ಸಮಾಜದ ಮುಖಂಡರೊಡಗೂಡಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳಿಗೆ ಗೌರವ ಸಮರ್ಪಿಸಿ ಕೃಪಾಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಜಯಣ್ಣ, ಎ.ಬಿ. ನಾಗರಾಜ್, ಗೋಪಾಲ್, ವೆಂಕಟೇಶ್, ಶ್ರೀನಿವಾಸ್, ಚಟ್ನಹಳ್ಳಿ ರಾಜಣ್ಣ, ಮೂರ್ತಿ,ದೇವರಾಜ್ ಜಗಳುರು ,ರಾಜ ಚನ್ನಗಿರಿ ಸೇರಿದಂತೆ ಇತರರು ಇದ್ದರು.
