ದಾವಣಗೆರೆ: ದಾವಣಗೆರೆ ಜಿಲ್ಲಾ ಶಾಲಾ ಆಟೋ ಮತ್ತು ವ್ಯಾನ್ ಚಾಲಕರ ಸಂಘಟನೆ ವತಿಯಿಂದ ವಿವಿಧ ಬೇಡಿಕೆಯನ್ನು ಇಡೆರಿಸುವಂತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ಜಿಲ್ಲಾಧ್ಯಕ್ಷರಾದ ವಿ ಮಂಜುನಾಥ್ ನೇತೃತ್ವದಲ್ಲಿ ದಾವಣಗೆರೆ ಉಸ್ತುವಾರಿ ಸಚಿವರು ಮತ್ತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆಯ ಕರ್ನಾಟಕ ಸರ್ಕಾರದ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನವರನ್ನ ಭೇಟಿ ಮಾಡಲಾಯಿತು.
ಚಾಲಕರಿಗೆ ಆಶ್ರಯ ಯೋಜನೆ ಮನೆ ಮತ್ತು ಸಮುದಾಯ ಭವನ ದಾವಣಗೆರೆ ಸಿಟಿಯಲ್ಲಿರುವ ಎಲ್ಲಾ ಆಟೋ ನಿಲ್ದಾಣಗಳಿಗೆ ಹೈಟೆಕ್ ಮಾದರಿಯಲ್ಲಿ ನಿಲ್ದಾಣವನ್ನು ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು. ಮನವಿಗೆ ಸಚಿವರಾದ ಮಲ್ಲಿಕಾರ್ಜುನ ಅವರು ಮನಸ್ಪೂರ್ವಕವಾಗಿ ಸ್ಪಂದಿಸಿ ಆದಷ್ಟು ಬೇಗ ನಿಮ್ಮ ಕೋರಿಕೆಯನ್ನು ನೆರವೇರಿಸಿ ಕೊಡುತ್ತೇನೆ ಎಂದು ತಿಳಿಸದ್ದಾರೆ.
