ಅನಾಥ ಬಾಲಕಿಯ ದತ್ತು ಪಡೆಯಲು ನಿರ್ಧರಿಸಿದ ಶಾಸಕ ರೇಣುಕಾಚಾರ್ಯ

 

ದಾವಣಗೆರೆ. ಜು.೧; ಹೊನ್ನಾಳಿ ತಾಲೂಕಿನ ದೊಡ್ಡೇರಹಳ್ಳಿ ಗ್ರಾಮದ ನಿತ್ಯಾನಂದ ಹಾಗೂ ರಾಧಾ ಅವರ ಏಕೈಕ ಸುಪುತ್ರಿ ಬಾಲಕಿ ಯುಕ್ತಿ ಎಂಬಾಕೆಯನ್ನು ಶಾಸಕ ಎಂ.ಪಿ ರೇಣುಕಾಚಾರ್ಯ ದತ್ತು ಪಡೆದಿದ್ದಾರೆ.

ತಾಯಿಯ ವಾತ್ಸಲ್ಯದಲ್ಲಿ ಬೆಳೆಯಬೇಕಿದ್ದ ಯುಕ್ತಿ ಹುಟ್ಟಿದ 10 ತಿಂಗಳಿಗೆ ತಾಯಿ ರಾಧಾ ಅವರನ್ನು ಕಳೆದುಕೊಂಡ ನತದೃಷ್ಟ ಬಾಲಕಿ, ತಂದೆ ನಿತ್ಯಾನಂದ ಹಾಗೂ ಅಜ್ಜಿ ವೀರಮ್ಮ ಅವರ ಆರೈಕೆಯಲ್ಲಿ ಬಾಲಕಿ ಯುಕ್ತಿ ಬೆಳೆಯುತ್ತಿದ್ದಳು.ತಂದೆ ನಿತ್ಯಾನಂದ ಅವರು ಜೀವನ ನಿರ್ವಹಣೆಗೆ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದರು. ತಾನು ಹುಟ್ಟಿದ 10 ತಿಂಗಳಿಗೇ ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ ಯುಕ್ತಿಯ ಜೀವನದಲ್ಲಿ 12 ವರ್ಷದ ನಂತರ ಮತ್ತೊಂದು ದೊಡ್ಡ ದುರಂತ ಸಂಭವಿಸಿದೆ.

ತಂದೆ ನಿತ್ಯಾನಂದ ಅವರಿಗೆ ಕೊರೋನಾ ಸೋಂಕು ತಗುಲಿ  ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾರೆ. ತಂದೆ-ತಾಯಿಗಳ ಮಡಿಲಲ್ಲಿ  ಆಟವಾಡುತ್ತಾ ಬೆಳೆಯಬೇಕಾಗಿದ್ದ ಬಾಲಕಿ ಯುಕ್ತಿ,  ಇಬ್ಬರನ್ನು ಕಳೆದುಕೊಂಡು ಅನಾಥವಾಗಿರುವ ಸುದ್ದಿ ತಿಳಿದು ದೊಡ್ಡೇರಹಳ್ಳಿ ಗ್ರಾಮದ ಅವರ ಸಂಬಂಧಿಕರ ಮನೆಗೆ  ಪತ್ನಿಯೊಂದಿಗೆ ಭೇಟಿನೀಡಿ ವೈಯಕ್ತಿಕವಾಗಿ ಅವಳಿಗೆ ₹25000/- ರೂಪಾಯಿಗಳನ್ನು ನೀಡಿದ್ದಾರೆ.

ಚಿಕ್ಕ ವಯಸ್ಸಿಗೆ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥವಾಗಿದ್ದ ಬಾಲಕಿ ಯುಕ್ತಿಯ  ಸಂಬಂಧಿಕರು ಒಪ್ಪಿದರೆ ಅವಳನ್ನು ದತ್ತು ಪಡೆದು ತಂದೆ-ತಾಯಿ ಸ್ಥಾನದಲ್ಲಿ ನಾನು ನಿಂತು ಅವಳ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿಯಲ್ಲಿ ತೆಗೆದುಕೊಳ್ಳಲು ಇಚ್ಛಿಸಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!