ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ್ ಅಂತ್ಯೋದಯ ಯೋಜನೆ ಕರ್ನಾಟಕ ಸರ್ಕಾರ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ ಗೌರವಧನದ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪುರಸಭೆಯಲ್ಲಿ ನೊಂದಾಯಿತ ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.

ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ :ಹುದ್ದೆಯ ಸಂಖ್ಯೆ ೦೨, ದ್ವಿತೀಯ ಪಿ.ಯು.ಸಿ ಉತ್ತೀರ್ಣ ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ  ಮಾಸಿಕ ಗೌರವಧನ ರೂ.೮೦೦೦ ಪ್ರಯಾಣ ಭತ್ಯೆ ರೂ.೨೦೦೦ ವರೆಗೆ, ಕಂಪ್ಯೂಟರ್ ಜ್ಣಾನ ಹೊಂದಿರಬೇಕು(ಪ್ರಮಾಣ ಪತ್ರ ಪಡೆದಿರಬೇಕು.) ಪುರಸಭೆ ವ್ಯಾಪ್ತಿಯಲ್ಲಿ ಖಾಯಂ ನಿವಾಸಿಯಾಗಿದ್ದು, ಸ್ವ-ಸಹಾಯಸಂಘದಲ್ಲಿ ಸದಸ್ಯರಾಗಿರಬೇಕು.  ಬ್ಯಾಂಕಗಳಿಂದ ಸಾಲ ಪಡೆದು ಕಟ ಬಾಕಿದಾರರಾಗಿರಬಾರದು.

ಸರ್ಕಾರಿ /ಅರೆಸರ್ಕಾರಿ/ಎನ್.ಜಿ.ಓ ಗಳಲ್ಲಿ ಉದ್ಯೋಗಸ್ತರಾಗಿರಬಾರದು.  ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೋಳ್ಳುವ ಇಚ್ಚಾಶಕ್ತಿ ಹೊಂದಿರಬೇಕು. ಕಾರ್ಯನಿಮಿತ್ತ ಅಗತ್ಯವಿದ್ದಲ್ಲಿ ಹೊರ ಸಂಚಾರಕ್ಕೆ ಸಿದ್ದರಿರಬೇಕು. ೧೮ ರಿಂದ ೪೫ ವರ್ಷದೊಳಗಿನ ವಯೋಮಾನದಾವರಾಗಿಬೇಕು.

ಆಸಕ್ತ ಆಭ್ಯರ್ಥಿಗಳು ಪುರಸಭೆಯ ಕಚೇರಿ ಅವಧಿಯಲ್ಲಿ ಕಚೇರಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಜ.೧೫ ರಂದು ಸಂಜೆ ೫:೩೦ರ ರೊಳಗಾಗಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಮುಖ್ಯಾಧಿಕಾರಿಗಳು, ಪುರಸಭೆ, ಮಲೇಬೆನ್ನೂರು ರವರಿಗೆ ಸಲ್ಲಿಸುವುದು .ನಂತರ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ವೆಂದು ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!