ಅರ್ಥಶಾಸ್ತ್ರ ವೇದಿಕೆ ರಚನಾತ್ಮಕ ಕೆಲಸ ಮಾಡುತ್ತಿದೆ: ಪ್ರೊ.ಭೀಮಣ್ಣ ಸುಣಗಾರ್
ದಾವಣಗೆರೆ :ವಿಷಯಗಳು ಸೃಜನಾತ್ಮಕವಾಗಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದರೆ ಅದರಲ್ಲಿ ಆ ವಿಷಯಗಳ ಸಂಬಂಧದಪಟ್ಟ ವೇದಿಕೆಗಳ ಪಾತ್ರ ಬಹುಮುಖ್ಯ ವಾಗುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವೇದಿಕೆಯು ರಚನಾತ್ಮಕವಾಗಿ ಚಟುವಟಿಕೆಯಿಂದ ಕೆಲಸ ನಿರ್ವಹಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದ್ದರಿಂದ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗಳ ಜೊತೆಗೆ ವೇದಿಕೆಯ ಪದಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗೋಸ್ಕರ ಅಧ್ಯಾಪಕರಿಗೋಸ್ಕರ ಮಾಡಬೇಕಾದ ಕೆಲಸಗಳನ್ನು ಮಾಡುತ್ತಾ ಬಂದಿರುತ್ತಾರೆ.
ಅವರ ಸೇವೆ ಹೀಗೆ ನಿರಂತರವಾಗಿರಲಿ ಎಂದು ಹೇಳಿದರು. ವೇದಿಕೆಯು ವಿಶ್ವವಿದ್ಯಾಲಯ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ವೇದಿಕೆಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯಾವುದೇ ಕಾರ್ಯವಾಗಲಿ ಹಾಗೂ ಅಧ್ಯಾಪಕರಿಗೆ ಬೇಕಾಗುವ ಯಾವುದೇ ಮಾರ್ಗದರ್ಶನವಾಗಲಿ ಸಿಗುವಂತಾಗಲಿ . ಆಗ ವೇದಿಕೆ ಬೆಳೆಯುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಿಂದ ಇತ್ತೀಚಿಗೆ ನಿವೃತ್ತರಾದ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಪ್ರೊ.ಭೀಮಣ್ಣ ಸುಣಗಾರ್ ರವರಿಗೆ ವೇದಿಕೆ ವತಿಯಿಂದ ಸನ್ಮಾನ ಕಾರ್ಯಕ್ರಮ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ಪ್ರೊ.ಹುಚ್ಚೆಗೌಡರವರಿಗೆ ಸನ್ಮಾನ ಮಾಡಲಾಯಿತು ಹಾಗೂ ಯುಜಿ ಪರೀಕ್ಷಾ ವಿಭಾಗದಲ್ಲಿ ಸುಸಜ್ಜಿತವಾಗಿ ಕೆಲಸ ನಿರ್ವಹಿಸಿದ ಪ್ರೊ.ಪಂಚಾಕ್ಷರಿ ರವರಿಗೆ ಸನ್ಮಾನ ಮಾಡಲಾಯಿತು.
ಮಾಜಿ ಕಲಾ ನಿಕಾಯ ಡೀನ ಪ್ರೆೊ ರಂಗಪ್ಪ ಎನ್ ಇ ಪಿ ಐದನೇ ಸೆಮಿಸ್ಟ್ ರ್ ಅರ್ಥಶಾಸ್ತರ್ ದ ಪಠ್ಯಕ್ರಮದ ಬಗ್ಗೆಕಾರ್ಯಾಗಾರ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಮಾಜಿ ವಿಭಾಗದ ಮುಖ್ಯಸ್ಥರಾದ ಪ್ರೊ ಸುಚಿತ್ರ ,ಪ್ರೊ ಸೇಲ್ವವಿ ,ಅರ್ಥಶಾಸತ್ರ ವೇದಿಕೆ ಮಾಜಿ ಅದ್ಯಕ್ಷ ಪ್ರೊ ಷಣ್ಮುಖ ,ವೇದಿಕೆ ಖಜಾಂಚಿ ರಾಮಪುರದ ಮಂಜಣ್ಣ ,ಕಾರ್ಯದರ್ಶಿ ಪ್ರವೀಣಕುಮಾರ ಉಪಸ್ತಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಪ್ರೊ. ಕಮ್ಮಾರ ಪ್ರವೀಣಕುಮಾರರಿಂದ, ಸ್ವಾಗತ ಪ್ರೊ .ಬೆಳ್ಳುಳ್ಳಿಕೊಟ್ರೇಶಿ, ,ನಿರೂಪಣೆ ಪ್ರೊ.ಶಾಂತಕುಮಾರಿ, ವಂದನಾರ್ಪಣೆ ಪ್ರೊ ಹನುಮಂತಪ್ಪ ನಡೆಯಿಸಿಕೊಟ್ಟರು.