Shakthi Yojane; ಗಾಳಿ ಸುದ್ದಿ ಗಾಳಿಲಿ ಬಿಟ್ಟು, ಶಕ್ತಿ ಯೋಜನೆ ಲಾಭ ಪಡೆಯಿರಿ – ಕೆ.ಎಲ್.ಹರೀಶ್ ಬಸಾಪುರ.

ಗಾಳಿ ಸುದ್ದಿ ಗಾಳಿ ಬಿಟ್ಟು, ಶಕ್ತಿ ಯೋಜನೆ ಲಾಭ ಪಡೆಯಿರಿ - ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ;ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಶಕ್ತಿ ಯೋಜನೆ (Shakthi Yojane) ಅನುಷ್ಠಾನಕ್ಕೆ ಬಂದು ಪ್ರತಿದಿನ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಗಾಳಿ ಸುದ್ದಿ ಗಾಳಿ ಬಿಟ್ಟು, ಶಕ್ತಿ ಯೋಜನೆ ಲಾಭ ಪಡೆಯಿರಿ - ಕೆ.ಎಲ್.ಹರೀಶ್ ಬಸಾಪುರ.

ಕಳೆದ ಕೆಲವು ದಿನಗಳಿಂದ ಶಕ್ತಿ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ, ರಾಜ್ಯ ಸರ್ಕಾರ ಈ ಯೋಜನೆಯನ್ನು ಆಗಸ್ಟ್ 15 ಮುಕ್ತಾಯಗೊಳಿಸಲಿದೆ ಎಂದು ಗಾಳಿ ಸುದ್ದಿ ಹರಡಿಸುತ್ತಿದ್ದು, ಇದರ ಬಗ್ಗೆ ರಾಜ್ಯದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಕಿವಿ ಕೊಡಬಾರದು, ಕಾಂಗ್ರೆಸ್ (Congress)ಪಕ್ಷದ ಈ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಸದಾ ಜನಪರ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದು ಅದನ್ನು ಮುಂದುವರಿಸಿಕೊಂಡು ಹೋಗುವ ಕಂಕಣಭದ್ಧ ಸರ್ಕಾರವಾಗಿದೆ ಎಂದು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ.ಎಲ್ ಹರೀಶ್ ಬಸಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!