ಲೋಕಲ್ ಸುದ್ದಿ

Bhadra; ಭದ್ರಾ ಅಚ್ಚುಕಟ್ಟು ನಾಲೆಗೆ 100 ದಿನಗಳು ನೀರು ಖಾಯಂ

ದಾವಣಗೆರೆ ಆ.17: ಭದ್ರಾ ಅಚ್ಚುಕಟ್ಟು ಪ್ರದೇಶದ (Bhadra Dam) ದಾವಣಗೆರೆ ವಿಭಾಗದ ನಾಲೆಯಲ್ಲಿ ಮಳೆ ಕಡಿಮೆ ಇರುವ ಕಾರಣ ನೀರು ನಿಲ್ಲಿಸಿ ಬೇಸಿಗೆ ಕಾಲದಲ್ಲಿ ಕೊಡಿ ಎಂದು ಕೆಲ ಅಡಿಕೆ ಬೆಳೆ ಬೆಳೆಯುವ ರೈತರು (farmer) ಮನವಿ ಮಾಡಿದ್ದಾರೆ ಎಂಬ ವದಂತಿ ಹಿನ್ನೆಲೆ ತಾಲೂಕಿನ ಹಲವಾರು ಹಳ್ಳಿಯ ರೈತರಲ್ಲಿ ಆತಂಕ ಮೂಡಿಸಿದ್ದು, ಆದರೆ ಯಾವುದೇ ರೀತಿಯ ಆತಂಕ ಬೇಡ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭದ್ರಾ ಅಚ್ಚುಕಟ್ಟು ನೀರಾವರಿ ನಿಗಮ ಸದಸ್ಯ ಕಾರ್ಯದರ್ಶಿ ಸೀನಿಯರ್ ಎಂಜಿನಿಯರ್ ಸುಜಾತಾ ಎನ್ ಭರವಸೆ ನೀಡಿದರು.

ರೈತರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ಈಗಾಗಲೇ ಕಳೆದ ಆಗಸ್ಟ್ 10ರಂದು ಕಾಲುವೆಗೆ ನೀರು ಬಿಡಲಾಗಿದೆ. ಭದ್ರಾ ಅಚ್ಚುಕಟ್ಟು ನೀರಾವರಿ ಯೋಜನೆ ನಿಗಮ ತೀರ್ಮಾನ ಕೈಗೊಂಡು ಆದೇಶ ಕೂಡ ಹೊರಡಿಸಿದೆ ಎಂದು ಹೇಳಿದರು.

ಐದು ಗ್ಯಾರಂಟಿಗಳ ಖಚಿತ ಅನುಷ್ಠಾನ, ಅಭಿವೃದ್ದಿ ಕೆಲಸಗಳು ಕುಂಠಿತವಾಗಲ್ಲ, ಆತಂಕಬೇಡ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ಆಗಸ್ಟ್ 16 ರಂದು ಅವರನ್ನು ಭೇಟಿಯಾದ ದಾವಣಗೆರೆ ಭಾಗದ ಲೋಕಿಕೆರೆ ಸೇರಿದಂತೆ ಹಲವು ರೈತರುಗಳಿಗೆ ಸ್ಪಷ್ಟನೆ ನೀಡಿದ್ದಾರೆ. 100 ದಿನಗಳು ಪೂರ್ಣ ಅವಧಿವರೆಗೆ ನಾಲೆಯಲ್ಲಿ ನೀರು ಬಿಡಲಾಗುವುದು. ಆದೇಶವನ್ನು ಯಾವುದೇ ಕಾರಣಕ್ಕೂ ಬದಲಿಸಲಾಗದು, ಅಲ್ಪಾವಧಿ ಬೆಳೆ ಬೆಳೆಯಲು ಅವಕಾಶ ಇದೆ ಎಂದು ತಮ್ಮನ್ನು ಭೇಟಿ ಮಾಡಿದ ರೈತರಿಗೆ ಹೇಳಿದರು.

Click to comment

Leave a Reply

Your email address will not be published. Required fields are marked *

Most Popular

To Top