congress; ಸಿದ್ದರಾಮಯ್ಯ-ಡಿಕೆಶಿ ಕಾಂಗ್ರೆಸ್ ಏಜೆಂಟ್‌ಗಳು: ಶ್ರೀನಿವಾಸ ದಾಸಕರಿಯಪ್ಪ
ದಾವಣಗೆರೆ, ಅ.17: ಐದು ಭಾಗ್ಯಗಳನ್ನು ಕೊಟ್ಟು ಕಾಂಗ್ರೆಸ್ (congress) ಸರಕಾರ ಕರ್ನಾಟಕ ಜನತೆಯನ್ನು ಬಡವರನ್ನಾಗಿ ಮಾಡಿದೆ ಎಂದು ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರದಿಂದ ಆರಂಭವಾದ ಐಟಿ ಶೋಧದ ವೇಳೆ 100 ಕೋಟಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡ ಸಂಬಂಧ ನಗರದಲ್ಲಿ ಮಾತನಾಡಿ, ರೈತರಿಗೆ ವಿದ್ಯುತ್ ಇಲ್ಲ, ನೀರಿನ ವ್ಯವಸ್ಥೆ ಇಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಸರಕಾರ ಅತ್ತ ಗಮನಹರಿಸಿಲ್ಲ. ಬದಲಾಗಿ ಕಾಂಗ್ರೆಸ್ ಹಣ ಮಾಡುತ್ತಿದೆ. ಈಗ ಸಿಕ್ಕಿಬಿದ್ದಿರುವ ಉದ್ಯಮಿಗಳು, ರಿಯಲ್‌ಎಸ್ಟೇಟ್‌ನವರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಡೆಯವರಾಗಿದ್ದಾರೆ. ಇಬ್ಬರು ಕೂಡ ಕಾಂಗ್ರೆಸ್‌ನ ಏಜೆಂಟ್‌ಗಳು. ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕೆಂಬ ಹಿನ್ನೆಲೆಯಲ್ಲಿ ಕರ್ನಾಟಕ ಜನರ ಸಮಸ್ಯೆ ಮರೆತು ಹಣ ವಸೂಲಿ ಮಾಡಲು ಕಾಂಗ್ರೆಸ್ ಸರಕಾರ ನಿಂತಿದೆ. ಆದರೆ ಬಿಜೆಪಿ ರೈತರ ಪರ ನಿಂತಿದ್ದು, ವಿದ್ಯುತ್‌ಗಾಗಿ ಹೋರಾಟ ನಡೆಸಿದ್ದೇವೆ ಪರಿಣಾಮ ಐದು ತಾಸು ವಿದ್ಯುತ್ ನೀಡಲು ಬೆಸ್ಕಾಂ ಅಧಿಕಾರಿಗಳು ಒಪ್ಪಿದ್ದಾರೆ. ನಮ್ಮ ಬಿಜೆಪಿ ಸರಕಾರವಿದ್ದಾಗ ನಮ್ಮ ಮೇಲೆ ಆರೋಪ ಮಾಡಿದ್ದರೂ ಅದನ್ನು ಸಾಬೀತು ಮಾಡೋದಕ್ಕೆ ಆಗಿಲ್ಲ. ಆದರೆ ಕಾಂಗ್ರೆಸ್‌ನವರು ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಕಾಂಗ್ರೆಸ್ ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ಅದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
Municipality; ಚನ್ನಗಿರಿ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಕೃಷ್ಣ ಡಿ ಕಟ್ಟಿಮನಿ ನೇಮಕ
ನಾವು ಆಡಳಿತ ವಿರೋಧಿಯನ್ನು ಕಟ್ಟಿಕೊಂಡು ಚುನಾವಣೆ ಮಾಡುತಿಲ್ಲ. ಆದರೆ ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಇದೆ, ನಾವು ಆಡಳಿತ ಮಾಡಿ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಚುನಾವಣೆಯಲ್ಲಿ ಮತ ಕೇಳುತ್ತಿದ್ದೇವೆ. ಮತದಾರರು ಯಾರಿಗೆ ಒಲವು ಕೊಡುತ್ತಾರೆ ಅವರು ಗೆಲ್ಲುತ್ತಾರೆ. ನೈತಿಕವಾಗಿ ಚುನಾವಣೆ ಮಾಡದೇ ಹಣ ಹಂಚಿ ಚುನಾವಣೆ ಗೆಲ್ಲಬೇಕೆಂಬುದು ಕಾಂಗ್ರೆಸ್ ನೀತಿ ಇದೆ. ಅದನ್ನು ನಾವು ಖಂಡಿಸುತ್ತೇವೆ. ಐಟಿ ದಾಳಿ ಬಿಜೆಪಿ-ಕಾಂಗ್ರೆಸ್ ಎಲ್ಲ ಕಡೆಯೂ ಆಗಿದೆ. ತನಿಖೆಯಾದರೆ ಗೊತ್ತಾಗುತ್ತದೆ. ಅಲ್ಲದೇ ಯಾರ ಮನೆಯಲ್ಲಿ ಹಣ ಇದೆ ಎಂದು ಗೊತ್ತಾಗುತ್ತದೆ ಎಂದು ಶ್ರೀನಿವಾಸ ದಾಸಕರಿಯಪ್ಪ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.