congress; ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ: ವಿನಯ್‌ ಕುಮಾರ್

ದಾವಣಗೆರೆ, ಅ.17: ಬಿಜೆಪಿ ಅಂದ್ರೆ “ಭ್ರಷ್ಟ ಜನತಾ ಪಾರ್ಟಿ’ ಎಂದು ಕಾಂಗ್ರೆಸ್ (congress) ಲೋಕಸಭಾ ಟಿಕೆಟ್ ಆಕಾಂಕ್ಷಿ ವಿನಯ್‌ಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರದಿಂದ ಆರಂಭವಾದ ಐಟಿ ಶೋಧದ ವೇಳೆ 100 ಕೋಟಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡ ಸಂಬAಧ ನಗರದಲ್ಲಿ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರ ಶೇ 40 ರಷ್ಟು ಉಳಿಸಿದ್ದ ಕಮಿಷನ್ ಹಣ ಈಗ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಬಂದು ಕೆಲವೇ ದಿನಗಳಾಗಿದ್ದು, ಅವರ ಮೇಲೆ ಬಿಜೆಪಿ ಸುಖಾ ಸುಮ್ಮನೆ ಆರೋಪ ಮಾಡುತ್ತಿದೆ. ಈ ಹಣ ಬಿಜೆಪಿಯವರದ್ದಾಗಿದೆ. ಬಿಜೆಪಿ ಸರಕಾರ ಇದ್ದಾಗ ಶೇ.೪೦ರಷ್ಟು ಹಣವನ್ನು ತೆಗೆದುಕೊಂಡು, ದುಡಿದು ಮನೆಯಲ್ಲಿ ಇಟ್ಟುಕೊಂಡಿದ್ದರು. ಅದನ್ನು ಆಗ ಖರ್ಚು ಮಾಡಿಲ್ಲ. ಅವತ್ತು ಖರ್ಚು ಮಾಡದೇ ಇರುವ ಹಣ ಇವತ್ತು ಸಿಕ್ಕಿದೆ. ಅಲ್ಲದೇ ಕಾಂಗ್ರೆಸ್ ಪಕ್ಷ ಅದನ್ನು ಹೊರತೆಗೆಯುತ್ತಿದೆ. ಇದು ಐಟಿ ದಾಳಿ ಇರಬಹುದು, ಇದರಲ್ಲಿ ರಾಜ್ಯದ ಪಾತ್ರವೂ ಇರುತ್ತದೆ. ಹಾಗಾಗಿ ಸಿಕ್ಕಿರುವ ಹಣ ಬಿಜೆಪಿಯದ್ದಾಗಿದೆ. ಅದು ಕೆಲವೇ ದಿನಗಳಲ್ಲಿ ಸಾಬೀತಾಗಲಿದೆ. ನಮ್ಮ ಸರಕಾರವು ಅದನ್ನು ಹೇಳುತ್ತಿದೆ. ಹಾಗಾಗಿ ಪ್ರತಿಯೊಬ್ಬರಲ್ಲಿ ಈ ಹಿಂದೆ ಬಿಜೆಪಿ ಸರಕಾರ ಮಾಡಿರುವ ಶೇ.40ರಷ್ಟು ಕಮಿಷನ್ ಛಾಯೆ ಹಾಗೆ ಉಳಿದಿದೆ. ಆದ್ದರಿಂದ ಇದನ್ನು ಭ್ರಷ್ಟ ಜನತಾ ಪಾರ್ಟಿ ಎಂದು ಕರೆಯುತ್ತಾರೆ ಎಂದು ವಿನಯ್ ಕುಮಾರ್ ಹೇಳಿದರು.

gb vinay; ಜನಸಾಮಾನ್ಯರ ಅಭಿವೃದ್ಧಿಗೆ ಸ್ಪಂದಿಸುವವರು ಬೇಕು: ಇನ್ ಸೈಟ್ಸ್ ವಿನಯ್

ಆಗ ಬಿಜೆಪಿ ಸರಕಾರ ಮಾಡಿದ್ದ ಕೆಲಸದ ಕಾರಣದಿಂದಲೇ ಈಗ ಬಿಜೆಪಿ ಹೊರಗಿದೆ. ಆದ್ದರಿಂದಲೇ ಇದುವರೆಗೂ ವಿರೋಧ ಪಕ್ಷ ನಾಯಕರು, ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡೋದಕ್ಕೆ ಆಗಿಲ್ಲ. ಭ್ರಷ್ಟಾಚಾರ ಕೇವಲ ದುಡ್ಡಿನಲ್ಲಿ ಮಾತ್ರವಲ್ಲ, ನೈತಿಕತೆಯಲ್ಲಿಯೂ ಬಿಜೆಪಿ ಭ್ರಷ್ಟಚಾರ ಮಾಡಿದೆ. ಬಿಜೆಪಿಯವರು ನಾಳೆ ¨ರಲಿರುವ ಸಂಸತ್ ಎಲೆಕ್ಷನ್‌ಗೆ ಅಷ್ಟೂ ಹಣ ಇಟ್ಟುಕೊಂಡಿರಬಹುದು. ಆದರೆ ಆ ದುಡ್ಡು ಇಂದು ಸಿಕ್ಕಿಬಿದ್ದಿದೆ. ಆದ್ದರಿಂದ ಬಿಜೆಪಿ ನಾಯಕರಿಗೆ ನೋವುಂಟು ಆಗಿರಬಹುದು. ಆ ನೋವಿನಲ್ಲಿ ಕಾಂಗ್ರೆಸ್‌ನ್ನು ಬ್ಲೇಮ್ ಮಾಡುತ್ತಿದ್ದಾರೆ. ಈ ಹಣ ಬಿಜೆಪಿಯದ್ದೇ, ಪಂಚ ರಾಜ್ಯ ಚುನಾವಣೆಗಾಗಿ ಇಟ್ಟುಕೊಂಡಿರುವ ಹಣ ಎಂದು ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪಿಸಿದೆ. ತನಿಖೆ ಮಾಡಿದ್ರೆ ಬಿಜೆಪಿ ಅಂತಲೇ ಬರುತ್ತದೆ. ಸರಕಾರ ಬಂದು ಎರಡು ಮೂರು ತಿಂಗಳು ಆಗಿಲ್ಲ. ಅತ್ಯಂತ ಕ್ಲೀನ್ ಸರಕಾರ ಕಾಂಗ್ರೆಸ್ ಸರಕಾರವಾಗಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಹಣ ಮಾಡುವುದಕ್ಕೆ ಅವಕಾಶವಿಲ್ಲ. ಕಮಿಷನ್ ಪಡೆದಿರುವ ಹಣ ಬಿಜೆಪಿ ಬಳಿ ಸಾಕಷ್ಟು ಇದ್ದು, ಅದನ್ನು ಹುಡುಕಿದರೆ ನೂರಾರು ಕೋಟಿ ಸಿಗುತ್ತದೆ. ಹುಡಕಬೇಕಷ್ಟೇ. ಸೋಲಿನ ಹತಾಶೆಯಿಂದ ಬಿಜೆಪಿ ನಾಯಕರು ಇಲ್ಲಸಲ್ಲದ ಮಾತನಾಡುತ್ತಾರೆ. ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ 22ರಿಂದ 25 ಸ್ಥಾನ ಗೆಲ್ಲುತ್ತದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸರಕಾರ ಪಬ್ಲಿಸಿಟಿಗೋಸ್ಕರ ಕಾಂಗ್ರೆಸ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಅಸ್ತಿತ್ವಕ್ಕಾಗಿ ಹೀಂಗಾದ್ರು ಮಾಡಿದ್ರೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಗಿಮಿಕ್‌ಗೋಸ್ಕರ ಬಿಜೆಪಿ ಸಾಮಾಜಿಕಜಾಲತಾಣದಲ್ಲಿ ಇಲ್ಲ ಸಲ್ಲದನ್ನು ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಬಿಜೆಪಿ ಮುಕ್ತ ಕರ್ನಾಟಕ ಮಾಡುತ್ತೇವೆ. ಆದ್ದರಿಂದ ಬಿಜೆಪಿ ಹತಾಶೆ ಮನೋಭಾವದಿಂದ ಮಾತನಾಡುತ್ತಿದೆ ಎಂದು ವಿನಯ್‌ಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!