ನ್ಯಾಮತಿ ತಹಸೀಲ್ದಾರ್ ಎದುರು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನ.!
ನ್ಯಾಮತಿ: ತಾಲೂಕಿನ ಲಕ್ಕಿನಕೊಪ್ಪ ಗ್ರಾಮದ ಸಹೋದರ ಮಕ್ಕಳ ನಡುವಿನ ಜಮಿನು ವಿಚಾರವಾಗಿ ತಹಶಿಲ್ದಾರ್(ತಾಲೂಕು ದಂಡಾಧಿಕಾರಿ)ಗಳ ಎದುರಿಗೆ ವಿಷ ಸೇವಿಸಿ ಆತ್ನಹತ್ಯೆ ಯತ್ನಿಸಿದ ಘಟನೆ ಶುಕ್ರವಾರ ಜರುಗಿದೆ.
ಕನ್ಯಾನಾಯ್ಕ ಮತ್ತು ಕೃಷ್ಣಾನಾಯ್ಕ ಇಬ್ಬರು ಸಹೋದರನಾಗಿದ್ದು ಕನ್ಯಾನಾಯ್ಕ ನಿಧನದ ನಂತರ ಉಳುಮೆ ಮಾಡುತ್ತಿದ್ದ ಕೃಷ್ಣಾನಾಯ್ಕ ಮಗ ಲೋಕಶನಾಯ್ಕ ಜಮೀನು ಬಿಟ್ಟುಕೊಡುವಂತೆ ಕನ್ಯಾನಾಯ್ಕನ ಮಕ್ಕಳು ಸಲ್ಲಿಸಿದ್ದ ದಾಖಲಾತಿಗಳ ವಂಶವೃಕ್ಷದ ಆಧಾರದಂತೆ ಕನ್ಯಾನಾಯ್ಕನ ಮಕ್ಕಳ ಹೆಸರಿಗೆ ಖಾತೆ ಆದದ್ದನ್ನು ಖಂಡಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಅವರಿಗೆ ಕಾನೂನು ರೀತಿ ಹೋರಾಟ ಮಾಡಲು ಅವಕಾಶ ಇದೆ ಜಿಲ್ಲಾ ಕೋರ್ಟ್‌ಗೆ ಅವರು ಮೆಲ್ಮನವಿ ಸಲ್ಲಿಸಲು ಅವಕಾಶ ಇರುವುದಾಗಿ ತಾಲೂಕು ದಂಡಾಧಿಕಾರಿ ಎಂ.ರೇಣುಕಾ ಹೇಳಿದ್ದಾರೆ.