ದಾವಣಗೆರೆಯ ಜಿಎಂಐಟಿ ಯಲ್ಲಿ ಎತ್ನಿಕ್ ಡೇ ಸಂಭ್ರಮಾಚರಣೆ
ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ದಿನಾಂಕ 18ನೇ ಶನಿವಾರದಂದು ವಿದ್ಯಾರ್ಥಿಗಳು ಒಂದುಗೂಡಿ ನಮ್ಮ ದೇಶದ ಪ್ರಾಂತ್ಯ ಮತ್ತು ಧರ್ಮಗಳ ವೇಷಭೂಷಣ ಧರಿಸಿ ಸಂಭ್ರಮಿಸುವ ಸಾಂಪ್ರದಾಯಕ ಉಡುಪು ದಿನಾಚರಣೆ ಎತ್ನಿಕ್ ಡೇ ಅದ್ದೂರಿಯಿಂದ ಆಚರಿಸಲಾಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಲವು ಬಗೆಯ ವೇಷ ಭೂಷಣದಿಂದ ಭಾರತ ದೇಶದ ಭಾವೈಕ್ಯತೆಯನ್ನು ಮೆರೆದರು. ಈ ಸಂಭ್ರಮದ ದಿನವನ್ನು ಎಲ್ಲಾ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು. ತಮ್ಮ ವೇಷ ಭೂಷಣದಿಂದ ಎಲ್ಲರ ಗಮನ ಸೆಳೆಯುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳಲ್ಲದೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಸಂತೋಷದಿಂದ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಸಂಭ್ರಮಾಚರಣೆಯು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಅತಿ ವೈಭವಪೂರಿತವಾಗಿ ನಡೆದು ಕಾಲೇಜಿನ ತೆರೆದ ಸಭಾಂಗಣದಲ್ಲಿ ಅಂತ್ಯಗೊಂಡಿತು. ಎಲ್ಲಾ ವಿದ್ಯಾರ್ಥಿಗಳು ವಿವಿಧ ಉಡುಗೆ-ತೊಡುಗೆಗಳ ಮೂಲಕ ಗಮನವನ್ನು ಸೆಳೆದರು. ಕೆಲ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬಿಸಿಯಾಗಿದ್ದರೆ ಇನ್ನು ಕೆಲವು ವಿದ್ಯಾರ್ಥಿಗಳು ಕುಣಿಯುವುದರಲ್ಲಿ ಮಗ್ನರಾಗಿದ್ದರು.
ಈ ಸಮಾರಂಭದಲ್ಲಿ ವಿಭಾಗ ಮಟ್ಟದಲ್ಲಿ ಮತ್ತು ವೈಯಕ್ತಿಕ ಮಟ್ಟದಲ್ಲಿ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಭಾಗ ಮಟ್ಟದಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಪ್ರಥಮ ಸ್ಥಾನ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ದ್ವಿತೀಯ ಸ್ಥಾನ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ತೃತೀಯ ಸ್ಥಾನಗಳನ್ನು ಗಳಿಸಿದವು. ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ ವಿಜಯಕುಮಾರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು ಗಳು ಪ್ರಾಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
garudavoice21@gmail.com 9740365719