ಬಿಜೆಪಿಗೆ ಬಾಳ ಸಾಹೇಬ್ ಠಾಕ್ರೆ ಶಾಪ ತಟ್ಟಲ್ಲಿದೆ; ಟಿ. ಅಸ್ಗರ್

ಬಿಜೆಪಿಗೆ ಬಾಳ ಸಾಹೇಬ್ ಠಾಕ್ರೆ ಶಾಪ ತಟ್ಟಲ್ಲಿದೆ; ಟಿ. ಅಸ್ಗರ್

ದಾವಣಗೆರೆ: ಮಹಾರಾಷ್ಟ್ರದ ಮರಾಠ ಸಮುದಾಯದ ಸರ್ವೋಚ್ಚ ನಾಯಕ ಬಾಳ ಸಾಹೇಬ್ ಠಾಕ್ರೆ ಕಠಿಣ ಪರಿಶ್ರಮದಿಂದ ಕಟ್ಟಿದ ಶಿವಸೇನೆ ಪಕ್ಷದಲ್ಲಿ ಭಿನ್ನಮತ ಸೃಷ್ಟಿಸಿ, ಅವರ ಮಗ ಉದ್ದವ ಠಾಕ್ರೆ ಅವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅವರದ್ದೆ ಪಕ್ಷದ ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಮಾಡಿದ್ದಲ್ಲದೇ, ಶಿವಸೇನೆ ಪಕ್ಷದ ಚಿಹ್ನೆ ಅವರಿಂದ ಕಸಿದು ಕೊಂಡಿರುವ ಬಿಜೆಪಿ ಪಕ್ಷಕ್ಕೆ ದಿವಂಗತ ಬಾಳ ಸಾಹೇಬ್ ಠಾಕ್ರೆ ಶಾಪ ತಟ್ಟಲ್ಲಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಟೀಕಿಸಿದ್ದಾರೆ.

ಮಹಾರಾಷ್ಟ್ರ ಮರಾಠಿ ಭಾಷಿಕರ ನ್ಯಾಯಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಆನೇಕ ಸಂದರ್ಭಗಳಲ್ಲಿ ಉಗ್ರ ಹೋರಾಟ ಮಾಡಿದ ಸ್ವಾಭಿಮಾನಿ ಶಿವಸೇನೆ ಪಕ್ಷ ತನ್ನ ಜೋತೆ ಬರಲಿಲ್ಲ ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಮೋಸ ಮಾಡುವ ಮೂಲಕ ಪ್ರಾದೇಶಿಕ ಪಕ್ಷಗಳಿಗೆ ಯಾವ ರೀತಿ ಮುಗಿಸಬೇಕು ಎಂದು ತೋರಿಸಿದೆ. ಇದರಿಂದ ಬುದ್ಧಿ ಕಲಿತು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಬಿಜೆಪಿ ಪಕ್ಷವನ್ನು ದೇಶದಿಂದ ಕಿತ್ತೊಗೆಯಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

ಮರಾಠಿ ಅಸ್ಮಿತೆಗೆ ಧಕ್ಕೆಯುಂಟು ಮಾಡಿರುವ ಬಿಜೆಪಿ ಪಕ್ಷಕ್ಕೆ ಬರುವ ದಿನಗಳಲ್ಲಿ ಮರಾಠ ಸಮಾಜ ತಿರಸ್ಕರಿಸ ಬೇಕು ಹಾಗೂ ರಾಜ್ಯದಲ್ಲಿ ಇರುವ ಮರಾಠ ಸಮಾಜ ಬರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!