ಎಸ್ ಎಸ್ ಮಲ್ಲಿಕಾರ್ಜುನ ಪರ ಚುನಾವಣಾ ತಯಾರಿ ಕುರಿತು ಪಾರ್ಕ್ ನಲ್ಲಿ ಸಭೆ

ಎಸ್ ಎಸ್ ಮಲ್ಲಿಕಾರ್ಜುನ ಪರ ಚುನಾವಣಾ

ದಾವಣಗೆರೆ: ವಿದ್ಯಾನಗರ ಪಾರ್ಕ್ ನಲ್ಲಿ ವಿದ್ಯಾನಗರ, ತರಳಬಾಳು ಬಡಾವಣೆ, ರಂಗನಾಥ ಬಡಾವಣೆ, ಬನಶಂಕರಿ ಬಡಾವಣೆಯ ಹಿರಿಯ ನಾಗರಿಕರು ಮಹಿಳೆಯರು ಯುವಕರು ಮತ್ತು

ಎಸ್.ಎಸ್.ಎಂ ಅಭಿಮಾನಿಗಳು ಸಭೆ ಸೇರಿ ಮುಂದಿನ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ರವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಲು ತಾವು ಮತದಾನ ಮಾಡುವಷ್ಟೇ ಅಲ್ಲದೆ, ಬೇರೆ ಬಡಾವಣೆಗಳಲ್ಲಿಯೂ ಸಹ ಮನೆ ಮನೆಗೆ ತೆರಳಿ ದಾವಣಗೆರೆಯ ಅಭಿವೃದ್ಧಿಗೆ ಎಸ್.ಎಸ್ ಮಲ್ಲಿಕಾರ್ಜುನ್ ರವರ ಅವಶ್ಯಕತೆ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡುವ ಮೂಲಕ ಮತಯಾಚಿಸಬೇಕು ಎಂದು ತೀರ್ಮಾನಿಸಲಾಯಿತು.

ಸುಮಾರು 300 ಜನಕ್ಕೂ ಹೆಚ್ಚು ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಎಸ್.ಎಸ್ ಮಲ್ಲಿಕಾರ್ಜುನ್ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಾದ ಸಿಸಿ ರಸ್ತೆ, ಕುಡಿಯುವ ನೀರು, ಗಾಜಿನಮನೆ, ವಿದ್ಯುತ್ ದೀಪಗಳು, ಪಾರ್ಕ್ ಅಭಿವೃದ್ಧಿ ಹಾಗೂ ಇನ್ನಿತರ ದೂರದೃಷ್ಟಿ ಯೋಜನೆಗಳ ನೆನೆದು ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ಅಧಿಕಾರದಲ್ಲಿರದೆ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿಯ ವಿಷಯದಲ್ಲಿ ದಾವಣಗೆರೆಗೆ ಆಗಿರುವ ನಷ್ಟವನ್ನು ಈ ಚುನಾವಣೆಯಲ್ಲಿ ಮತ್ತೆ ಮಲ್ಲಿಕಾರ್ಜುನ್ ರವರಿಗೆ ಅಧಿಕಾರ ನೀಡುವ ಮೂಲಕ ಸರಿ ಮಾಡುವ ಸಂಕಲ್ಪ ಕೈಗೊಳ್ಳಲಾಯಿತು.

ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವ ಸಂದರ್ಭದಲ್ಲಿ ಮಾತನಾಡಿದ ಕಾರಿಗನೂರು ರಾಜಶೇಖರ್ ಪಾಟೀಲ್ ಕಬ್ಬನ್ನು ಆನೆಯ ಮುಂದೆ ಹಾಕಬೇಕೇ ವಿನಃ ಕುರಿಯ ಮುಂದಲ್ಲ
ಅಧಿಕಾರವೆಂಬ ಕಬ್ಬನ್ನು ತಿನ್ನುವ ಶಕ್ತಿ ಇರುವಂತಹ ಆನೆಯ ಮುಂದೆ ಹಾಕಬೇಕೇ ವಿನಹ, ಅಧಿಕಾರವೆಂಬ ಕಬ್ಬನ್ನು ತಿನ್ನಲು ಶಕ್ತಿ ಇರದ ಕುರಿಯ ಮುಂದಲ್ಲ… ಎಂದು ಹೇಳುವ ಮೂಲಕ ಅಧಿಕಾರ ಉಪಯೋಗಿಸಿ ಅಭಿವೃದ್ಧಿ ಮಾಡುವ ಮಲ್ಲಿಕಾರ್ಜುನ್ ರವರ ಶಕ್ತಿಯನ್ನು ಸ್ಮರಿಸಿದ್ದು ವಿಶೇಷವಾಗಿತ್ತು.

ಈ ಪೂರ್ವಭಾವಿ ಸಭೆಯಲ್ಲಿ ಅರವಿಂದ್ ಎಚ್‌.ಬಿ, ಮುದೇಗೌಡ್ರು ಗಿರೀಶ್, ಈಶ್ವರಪ್ಪ ಎಂ.ಜಿ, ಶಿವಲಿಂಗಪ್ಪ, ಸೋಮಶೇಖರಪ್ಪ, ಕುಣೆಬೆಳೆಕೆರೆ ಬಸವರಾಜಪ್ಪ, ಆಲೂರು ಮಂಜುನಾಥ್, ಪಂಚಣ್ಣ, ಲೋಕಿಕೆರೆ ಕೆಂಚಣ್ಣ, ಕೆ.ಜಿ ಶಿವಕುಮಾರ್, ಕೊರಟಗೆರೆ ಶಿವಕುಮಾರ್, ನಾರಾಯಣ್ ರಜಪೂತ್, ಶೇಖರಪ್ಪ, ಕಾರಿಗನೂರು ರಾಜಶೇಖರ್ ಪಾಟೀಲ್, ರಾಜೇಶ್ವರಿ, ಶಿವಕುಮಾರ್ ಆನೆಕೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!