ಭದ್ರಾ ಬಲನಾಲೆಯಲ್ಲಿ ಪಂಪ್ ಸೆಟ್ ತೆರವು, ನಿಷೇಧಾಜ್ಞೆ ಜಾರಿ – ತಹಸೀಲ್ದಾರ್  ಡಾ.ಅಶ್ವಥ್ ಆದೇಶ

ಭದ್ರಾ ಬಲನಾಲೆ

ದಾವಣಗೆರೆ; ಭದ್ರಾನಾಲಾ ಕಾಲುವೆಗಳಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್‍ಗಳ ತೆರವು ಕಾರ್ಯಾಚರಣೆ ಸಂಬಂಧ ದಾವಣಗೆರೆ ತಾಲ್ಲೂಕು ಮಾಯಾಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಶಂಕರನಹಳ್ಳಿ ಗ್ರಾಮ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶವನ್ನು ನಿμÉೀಧಿತ ಪ್ರದೇಶವೆಂದು ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿ  ಡಾ.ಅಶ್ವಥ್.ಎಂ.ಬಿ ಆದೇಶಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳು ಮತ್ತು ಕುಡಿಯುವ ನೀರಿನ ಉದ್ದೇಶದಿಂದ  ಫೆ. 16 ರಿಂದ ಭದ್ರಾ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಪ್ರಸ್ತುತ ರಾಜ್ಯ ಮತ್ತು ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ಕುಡಿಯುವ ನೀರಿಗೆ ತುಂಬಾ ಬೇಡಿಕೆ ಇದ್ದು ಭದ್ರಾಕಾಲುವೆ ಯಿಂದ ದಾವಣಗೆರೆÀ ಸೇರಿದಂತೆ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಬರಗಾಲವಿರುವುದರಿಂದ ಅನಧಿಕೃತ ಪಂಪ್‍ಸೆಟ್‍ಗಳನ್ನು ತೆರವು ಕಾರ್ಯಾಚರಣೆ ಸಮಯದಲ್ಲಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುವ ಮತ್ತು ಗಲಭೆಗಳಾಗುವ ಸಂಭವಿರುವುದರಿಂದ ದಾವಣಗೆರೆ ಶಾಖಾ ಕಾಲುವೆ 34 ಕಿ.ಮೀ.ರಿಂದ 42 ಕಿ.ಮೀ ರವರೆಗೆ ಅಂದರೆ ಎಕ್ಕೆಗೊಂದಿ ಗ್ರಾಮದಿಂದ ಅಥವಾ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಶಂಕರನಹಳ್ಳಿ ಗ್ರಾಮದವರೆಗೆ ನಿμÉೀಧಿತ ಪ್ರದೇಶವಾಗಿದೆ.
ಫೆ 19 ರಿಂದ ಫೆ.23 ರವರೆಗೆ ‘ದಾವಣಗೆರೆ ತಾಲ್ಲೂಕು ಮಾಯಾಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂರು ಗಡಿಯಿಂದ ಶಂಕರನಹಳ್ಳಿ “ಗ್ರಾಮ ವ್ಯಾಪ್ತಿಯಲ್ಲಿ ಬರುವ ಭದ್ರಾ ಕಾಲುವೆಗಳ ಸುತ್ತಮುತ್ತ ಕಾಲುವೆಯಿಂದ ಬಲ ಮತ್ತು ಎಡಭಾಗದಿಂದ 200 ಮೀ ರವರೆಗಿನ ಪ್ರದೇಶದ ವ್ಯಾಪ್ತಿಯಲ್ಲಿ ನಿμÉೀಧಾಜ್ಞೆ ಜಾರಿಗೊಳಿಸಲಾಗಿದೆ. ನಿμÉೀದಾಜ್ಞೆ ಜಾರಿಯಿರುವ 4 ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿμÉೀಧಿಸಿದೆ, ನಿμÉೀಧಾಜ್ಞೆ ಸಮಯದಲ್ಲಿ ಶಸ್ತ್ರ, ಬಡಿಗೆ,ಬರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಟಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದಂತಹ ಯಾವುದೇ ಮಾರಶಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿμÉೀಧಿಸಿದೆ,ಕಲ್ಲುಗಳನ್ನು ಕಾರಪದಾರ್ಥಗಳನ್ನು ಇಲ್ಲವೇ ಸ್ಫೋಟಕ ವಸ್ತುಗಳು, ತೆಗೆದುಕೊಂಡು ಹೋಗುವುದು  ನಿμÉೀಧಿಸಿದೆ, ಬಹಿರಂಗವಾಗಿ ಘೋಷಣೆಗಳನ್ನು ಕೂಗುವುದು. ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಮಾಡುವುದು, ನನ್ನ ಅಥವಾ ನಕಲಿ ಪ್ರದರ್ಶನಗಳನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿμÉೀಧಿಸಿಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!