Bhadra Dam; ಎಡದಂಡೆ ಕಾಲುವೆ ಇಂದಿನಿಂದಲೇ ನೀರು ಹರಿವು ಸ್ಥಗಿತ

ಮಕ್ಕಳಿಗೆ ಸಮಸ್ಯೆಯಾಗದಂತೆ ಪಠ್ಯ ಪರಿಷ್ಕರಣೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ, ಸೆ.06: ಭದ್ರಾ (Bhadra Dam) ಎಡದಂಡೆ ಕಾಲುವೆ ಇಂದಿನಿಂದಲೇ ನೀರು ಹರಿವು ಸ್ಥಗಿತ ಮಾಡುವಂತೆ, ಬಲದಂಡೆ ಕಾಲುವೆ ಸೆ.11ರಂದು ನಿರ್ಧರಿಸಲು ಶಿವಮೊಗ್ಗದಲ್ಲಿ ನಡೆದ ಐಸಿಸಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಬಳಕೆ ಹಾಗೂ ತೋಟಗಳ ರಕ್ಷಣೆಗೆ ಆದ್ಯತೆ ನೀಡುವ ದೃಷ್ಟಿಯಿಂದ, ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಹರಿಸುತ್ತಿರುವ ನೀರನ್ನು ಸೆಪ್ಟೆಂಬರ್ 6ರಿಂದಲೇ ನಿಲ್ಲಿಸಬೇಕು ಎಂದು ಮಲವಗೊಪ್ಪದ ಭದ್ರಾಕಾಡ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭೆಯ ನಂತರ ಐಸಿಸಿ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿ ಬಿಕ್ಕಟ್ಟು ಶಮನವಾಗಿದೆ ಎಂದರು.

ಎಡದಂಡೆ ನಾಲೆ ಭದ್ರಾವತಿ ಹಾಗೂ ತರೀಕೆರೆ ತಾಲೂಕಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಭದ್ರಾ ಜಲಾಶಯದಿಂದ ಈಗ ನಿತ್ಯ 380 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಭದ್ರಾ ಬಲದಂಡೆ ನಾಲೆಗೆ ಹಾಲಿ ನಿತ್ಯ 2650 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಬೆಳೆಗಾರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಾಲೆಗೆ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ನೀರು ಹರಿಸಬೇಕೆ. ಇಲ್ಲವೇ ಕಾಲುವೆಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಬೇಕೆ..?

govt teachers jobs; ಶಿಕ್ಷಕರ ಹುದ್ದೆಗಳ ಭರ್ತಿಗೆ ಮಾಹಿತಿ ಕೇಳಿದ ಸರ್ಕಾರ

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ರೊಂದಿಗೆ ಚರ್ಚಿಸಿ ಸೆಪ್ಟೆಂಬರ್ 11ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ದಾವಣಗೆರೆ ಭಾಗದ ಜನಪ್ರತಿನಿಧಿಗಳು, ರೈತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಲಾಗುವುದು. ಮಳೆ ಬರಲಿದೆ ಎಂಬ ವಿಶ್ವಾಸದಿಂದ ಅಧಿಕಾರಿಗಳು 100 ದಿನಗಳ ಕಾಲ ನಾಲೆಗೆ ನೀರು ಹರಿಸುವುದಾಗಿ ಹೇಳಿದ್ದರು. ಭತ್ತ ನಾಟಿ ಮಾಡದಂತೆಯೂ ರೈತರಿಗೆ ಮನವಿ ಮಾಡಿದ್ದರು. ಆದರೂ, ಅಚ್ಚುಕಟ್ಟು ಭಾಗದ ರೈತರು ಸ್ವಾಭಾವಿಕವಾಗಿ ಭತ್ತ ನಾಟಿ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮಳೆ ಬಾರದೇ ಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಕಡಿಮೆ ಆಗಿದೆ.

ಇದೇ ಸ್ಥಿತಿ ಮುಂದುವರಿದ್ರೇ ಜಲಾಶಯ ಖಾಲಿ ಆಗಿ ಬೇಸಿಗೆಯಲ್ಲಿ ದುರಂತ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟು, ಭತ್ತ ಬೆಳೆಗಾರರ ಹಿತವನ್ನು ಮುಂದಿಟ್ಟುಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಮಧು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!