bjp ticket; ಮತ್ತೊಂದು ಬಿಜೆಪಿ ಟಿಕೆಟ್ ಡೀಲ್..! ಈ ಬಾರಿ ನಳಿನ್ ಹೆಸರು ಥಳುಕು.!

ವಿಜಯನಗರ (ಕೊಟ್ಟೂರು); ಬಿಜೆಪಿ bjp ticket ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್​ ಕೊಡಿಸುವುದಾಗಿ 2.03 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣ ಬಯಲಿಗೆ ಬಂದಿದ್ದು, ಇಬ್ಬರು ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಚೈತ್ರ ಅಂಡ್ ಟೀಮ್ ಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿತ್ತು.

ವಂಚನೆಗೊಳಗಾದ ವ್ಯಕ್ತಿಯ ಹೆಸರು ಶಿವಮೂರ್ತಿ. ಇವರು ಮೂಲತಃ ಹಗರಿಬೊಮ್ಮನಹಳ್ಳಿಯವರು. ಇವರಿಗೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ರೇವಣಸಿದ್ದಪ್ಪ ಹಾಗೂ ಪುತ್ತೂರು ಬಿಜೆಪಿ ಮುಖಂಡ ಶೇಖರ್ ಎನ್.ಪಿ ಎಂಬುವವರು 2023 ರ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ (ಎಸ್​ಸಿ) ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ದೋಚಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

british law; ಬ್ರಿಟಿಷರ ಕಾನೂನಿಗೆ ಭಾರತೀಯತೆಯ ಸ್ಪರ್ಶ; ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬದಲಾಯಿಸಲು 3 ಹೊಸ ಕಾನೂನು ಜಾರಿ; ಅಮಿತ್ ಶಾ ಘೋಷಣೆ

ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಶೇಖರ್ ಭೇಟಿಯಾಗಿದ್ದರು. ಬಳಿಕ ಕಟೀಲ್​ ಟಿಕೆಟ್​ ವಿಚಾರವಾಗಿ ಶೇಖರ್ ಜೊತೆ ಮಾತನಾಡಿ ಎಂದು ತಿಳಿಸಿದ್ದರು ಎಂಬುದಾಗಿ ದೂರು ದಾಖಲಿಸಿದ್ದು, ಬಿಜೆಪಿ ಪಕ್ಷದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.

ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ಎಸ್​.ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೊಟ್ಟೂರಿನ ಬಿಜೆಪಿ ಮುಖಂಡ ರೇವಣ್ಣ ಸಿದ್ದಪ್ಪ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ ಎಂಬುವವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪರಿಚಯವಾಗಿತ್ತು.

2023ರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನನ್ನನ್ನು ಪದೇ ಪದೇ ಭೇಟಿ ಮಾಡಿ ಬಿಜೆಪಿ ಟಿಕೆಟ್​ ಕೊಡಿಸುವೇ. ನೀವು ಟಿಕೆಟ್ ಪಡೆಯಲು ಯೋಗ್ಯರು ಎಂಬುದಾಗಿ ತಿಳಿಸುತ್ತಿದ್ದರು. ನಂತರ 2022ರ ಅಕ್ಟೋಬರ್ 23ರಂದು ರೇವಣಸಿದ್ದಪ್ಪ ನನ್ನನ್ನು ಬೆಂಗಳೂರಿಗೆ ಕರೆತಂದು ಒಂದು ಹೋಟೆಲ್​​ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್​ ಅವರನ್ನು ಪಡಿಚಯಿಸಿದ್ದರು, ನಂತರ ಶೇಖರ್ ಅವರು ನಳಿನ್​ ಕುಮಾರ್ ಕಟೀಲ್ ಅವರ ಬೆಂಗಳೂರಿನ ಕಚೇರಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದರು.

ನಂತರ ನಳಿನ್ ಕುಮಾರ್ ಕಟೀಲ್​ ಅವರು ನನ್ನ ಬಳಿ ಮಾತನಾಡಿ ಟಿಕೆಟ್ ವಿಚಾರದ ಎಲ್ಲಾ ವ್ಯವಹಾರವನ್ನು ಶೇಖರ್ ಅವರ ಬಳಿ ಮಾತನಾಡಿ ಎಂಬುದಾಗಿ ದೂರುದಾರ ಶಿವಮೂರ್ತಿ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

muthalik; ಹಮಾಸ್-ಪ್ಯಾಲೇಸ್ತನ್ ಉಗ್ರರ ಪರ ಪ್ರತಿಭಟನೆ; ಮುತಾಲಿಕ್ ಕಿಡಿ

ತದನಂತರ ಶೇಖರ್​ ಅವರು ನನ್ನ ಬಳಿ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಹಣವನ್ನು ಕೇಳಿದ್ದಾರೆ. ಟಿಕೆಟ್ ಸಿಗದೇ ಇದ್ದಲ್ಲಿ ನಿಮ್ಮ ಹಣವನ್ನು ವಾಪಸ್​ ಕೊಡುವುದಾಗಿ ಹೇಳಿದ್ದರು. ಅಂದಿನಿಂದ ಅಂದರೆ 2022 ಅಕ್ಟೋಬರ್ 09 ರಿಂದ ಶುರುವಾದ ವ್ಯವಹಾರ ಏಪ್ರಿಲ್ 2023 ಕ್ಕೆ 2 ಕೋಟಿ 03 ಲಕ್ಷದ ವರೆಗೂ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕೊಟ್ಟೂರಿನ ಕಟಾರಿ ಆಪ್ಟಿಕಲ್ ಮಾಲೀಕ ಮೋಹನ್ ಕಟಾರಿಯಾ, ಬಿಜೆಪಿ ಮಾಜಿ ಮುಖಂಡ, ಹಾಲಿ ಜನಾರ್ದನ ರೆಡ್ಡಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪುತ್ತೂರು ಮೂಲದ ಶೇಖರ್ ಪುರುಷೋತ್ತಮ್ ನಿರ್ಲಕಟ್ಟೆ (ರಾಜಶೇಖರ್) ಎಂಬುವವರಿಂದ ವಂಚನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು 1.90 ಕೋಟಿ ರೂ.ಗಳನ್ನು ಇದುವರೆಗೆ ಪಡೆಯಲಾಗಿದ್ದು ಅದರಲ್ಲಿ 65 ಲಕ್ಷ ರೂ.ಗಳನ್ನು ಪಕ್ಷದ ಬೇರೆ ಬೇರೆ ವಿಚಾರಕ್ಕೆ ಖರ್ಚು ಮಾಡಿಸಲಾಗಿದೆ ಎಂದು ತಾವು ಕೊಟ್ಟಿರುವ ಎಲ್ಲ ಹಣದ ದಾಖಲೆ ಸಮೇತ ದೂರು ನೀಡಿದ್ದಾರೆ.

ಚುನಾವಣೆ ವೇಳೆ ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಅನ್ನು ಬಿ. ರಾಮಣ್ಣ ಎಂಬುವವರಿಗೆ ಅನೌನ್ಸ್ ಆಗಿತ್ತು. ಟಿಕೆಟ್ ಘೋಷಣೆ ಆಗುತ್ತಿದ್ದಂತೆ ನಿವೃತ್ತ ಎಂಜಿನಿಯರ್ ಶಿವಮೂರ್ತಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹಾಗಾಗಿ ಅವರು ವಂಚಕರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ, ವಂಚಕರು ಹಣ ಕೊಡುವುದಿಲ್ಲ, ಏನ್ ಮಾಡುತ್ತೀಯೋ ಮಾಡು. ನಿನಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಅಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ನಂತರ ಟಿಕೆಟ್ ಸಿಗದಿದ್ದಾಗ ಹಣ ವಾಪಸ್ ಕೇಳಿದೆ. ಅದಕ್ಕೆ 90 ಲಕ್ಷ ರೂಪಾಯಿ ಚೆಕ್ ಅನ್ನು ಅ.10 ರಂದು ನೀಡಿದ್ದು, ಇದೀಗ ಈ ಚೆಕ್ ಬೌನ್ಸ್ ಆಗಿದೆ ಎಂದು ಆರೋಪ ಮಾಡಿದ್ದಾರೆ.

ಒಟ್ಟಾರೆ ಬಿಜೆಪಿ ರಾಜ್ಯಾದ್ಯಕ್ಷರ ವಿರುದ್ದ ಮತ್ತೋಮದು ಆರೋಪ ಕೇಳಿಬಂದಿದ್ದು ದೂರುದಾರ ಶಿವಮೂರ್ತಿ ಸಿಎಂ ಸಿದ್ದರಾಮಯ್ಯ ಅವರಿಗೂ ದೂರು ಸಲ್ಲಿಸಿದ್ದಾರೆ. ಇದೀಗ ಕೊಟ್ಟೂರು ಪೋಲೀಸರು ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

error: Content is protected !!